ದೇವುಡು ನರಸಿಂಹ ಶಾಸ್ತ್ರಿಗಳು ಸ್ವತಂತ್ರ ಮನೋಭಾವದ ಬಹುಮುಖ ಪ್ರತಿಭೆ. ಸಾಹಿತ್ಯ, ರಂಗಭೂಮಿ, ಚಲನಚಿತ್ರ, ಪತ್ರಿಕೋದ್ಯಮ ಮತ್ತು ರಾಜಕೀಯದಂಥ ವಿಭಿನ್ನ ಕ್ಷೇತ್ರಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅವರ ಸಾಹಿತ್ಯ ರಚನೆ ಅವರಿಗಿದ್ದ ಪೌರಾಣಿಕ ಪ್ರಜ್ಞೆ ಮತ್ತು ಒಲವನ್ನು ಸಾರುವಂತೆಯೇ ಅವರಿಗಿದ್ದ ಸಾಮಾಜಿಕ ಕಳಕಳಿ ಮತ್ತು ಬದ್ಧತೆಯನ್ನೂ, ಹೊಸ ಬೆಳವಣಿಗೆಗಳ ಬಗೆಗಿನ ಅವರ ಆಸಕ್ತಿಯನ್ನೂ ಸಾರಿ ಹೇಳುತ್ತದೆ. ಕಾದಂಬರಿ, ಸಣ್ಣಕಥೆ, ನಾಟಕ, ಮಕ್ಕಳ ಸಾಹಿತ್ಯ, ವಿಮರ್ಶೆ, ಜಾನಪದ, ಅನುವಾದ, ಸಂಪಾದನೆ ಮುಂತಾದ ಕ್ಷೇತ್ರಗಳಿಗೆ ಅವರು ನೀಡಿರುವ ಕಾಣಿಕೆ ವೈವಿಧ್ಯಮಯವಾದುದೂ, ಮಹತ್ವಪೂರ್ಣವಾದುದು ಆಗಿದೆ. ದೇವುಡು ಅವರ ’ಮಹಾಕ್ಷತ್ರಿಯ’ ಕಾದಂಬರಿಗೆ ಮರಣೋತ್ತರವಾಗಿ 1962ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸಂದಿದೆ.
ದೇವುಡು ನರಸಿಂಹ ಶಾಸ್ತ್ರಿಗಳ ಬದುಕು ಮತ್ತು ಬರಹವನ್ನು ಪರಿಚಯಿಸುವ ಕೃತಿಯನ್ನು ರಚಿಸಿದವರು ಸಿ. ಎನ್. ಶಿವಕುಮಾರ ಸ್ವಾಮಿ.
©2024 Book Brahma Private Limited.