ಕನ್ನಡದ ಆಸ್ತಿ ಎಂದೇ ಜನಪ್ರಿಯರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಕನ್ನಡ ಸಣ್ಣಕತೆಗಳ ಜನಕ ಕೂಡ. ಅವರು ರಚಿಸಿದ ಒಟ್ಟು ಕೃತಿಗಳ ಸಂಖ್ಯೆ 123. ಜೀವನ ಅವರು ನಡೆಸುತ್ತಿದ್ದ ಪತ್ರಿಕೆ. ಐದು ಸಂಪುಟಗಳಷ್ಟು ಸಣ್ಣಕತೆಗಳ ಬೃಹತ್ ಸಂಕಲನದಲ್ಲಿ ನೂರಾರು ಕತೆಗಳು ಹರಡಿಕೊಂಡಿವೆ. ಸುಬ್ಬಣ್ಣ, ಶೇಷಮ್ಮ ನೀಳ್ಗತೆಗಳು. ;ನವರಾತ್ರಿ’ ಸೇರಿದಂತೆ ಎಂಟು ಕವನ ಸಂಕಲನಗಳು ಪ್ರಕಟಿತ. ಕಾದಂಬರಿ ನಾಟಕ ಪ್ರಕಾರಗಳಲ್ಲೂ ಅವರ ಕುಸುರಿ ಕೆಲಸವಿದೆ. ’ಚಿಕವೀರ ರಾಜೇಂದ್ರ’, ’ಚೆನ್ನಬಸವ ನಾಯಕ’ ಕಾದಂಬರಿಗಳು. ’ಕಾಕನಕೋಟೆ’, ’ಲಿಯರ್ ಮಾಹಾರಾಜ’, ’ಚಂಡಮಾರುತ’,’ದ್ವಾದಶರಾತ್ರಿ’ ಅವರ ಪ್ರಮುಖ ನಾಟಕಗಳಲ್ಲಿ ಕೆಲವು.
’ಚಿಕವೀರ ರಾಜೇಂದ್ರ’ ಕೃತಿ ಜ್ಞಾನಪೀಠ ಪುರಸ್ಕಾರ ಪಡೆದಿದ್ದರೆ ಅವರ ಕಥಾಕೃಷಿಯನ್ನು ಪರಿಗಣಿಸಿ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಸಂದಿದೆ.
ಸಾಹಿತಿ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ ಅವರು ನವಕರ್ನಾಟಕ ಪ್ರಕಾಶನಕ್ಕಾಗಿ ಮಾಸ್ತಿ ಅವರ ಬದುಕು ಬರಹವನ್ನು ಕುರಿತ ಕೃತಿ ರಚಿಸಿದ್ದಾರೆ.
©2024 Book Brahma Private Limited.