’ಆನೆ ನಡೆದದ್ದೇ ಹಾದಿ’ ಎಂಬಂತೆ ಸೃಜನಾತ್ಮಕವಾಗಿ ಚಲಿಸಿದವರು ಪಿ. ಲಂಕೇಶ್. ಸಾಹಿತ್ಯ, ಅಧ್ಯಾಪನ, ಪತ್ರಿಕೋದ್ಯಮ, ಸಿನಿಮಾ, ರಂಗಭೂಮಿ, ಅನುವಾದ ಹೀಗೆ ಅವರು ಕೈಯಾಡಿಸದ ಕ್ಷೇತ್ರಗಳೇ ಇಲ್ಲ. ಸುಮಾರು ಎರಡು ದಶಕಗಳ ಕಾಲ ಕನ್ನಡದ ಮಟ್ಟಿಗೆ ಒಂದು ವಿದ್ಯಮಾನವೇ ಆಗಿದ್ದವರು ಲಂಕೇಶ್. ಸದಾ ಒಂದಿಲ್ಲೊಂದು ಹೋರಾಟಗಳಿಂದಾಗಿ ಸುದ್ದಿಯಲ್ಲಿರುತ್ತಿದ್ದ ಲಂಕೇಶರು ರಾಜಕೀಯ ಸಾಹಸಕ್ಕೂ ಮುಂದಾದವರು. ಕರ್ನಾಟಕ ಪ್ರಗತಿ ರಂಗ ಅವರ ನೇತೃತ್ವದಲ್ಲಿ ಹುಟ್ಟಿದ ರಾಜಕೀಯ ಸಂಘಟನೆ. ಈಗಲೂ ಯುವ ಲೇಖಕರು, ಪತ್ರಕರ್ತರ ಪಾಲಿಗೆ ಸ್ಫೂರ್ತಿಯ ಚಿಲುಮೆ. ಅವರ ’ಕಲ್ಲು ಕರಗುವ ಸಮಯ’ ಕಥಾಸಂಕಲನ 1993ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೆ ಪಾತ್ರವಾಗಿದೆ.
ಕೃತಿಯಲ್ಲಿ ಹಾಲತಿ ಸೋಮಶೇಖರ್ ಲಂಕೇಶ್ ಅವರ ಬದುಕು, ಬರಹವನ್ನು ಕಟ್ಟಿಕೊಟ್ಟಿದ್ದಾರೆ.
©2024 Book Brahma Private Limited.