ಬಿದರ ಹಳ್ಳಿ ನರಸಿಂಹ ಮೂರ್ತಿ ಇಲ್ಲಿ ಶಿವಪ್ರಕಾಶ್ ಬದುಕು ಬರಹಗಳನ್ನು ಸಂಗ್ರಹಿಸಿದ್ದಾರೆ. ಇಲ್ಲಿ ಶಿವಪ್ರಕಾಶ್ ಅವರ ವ್ಯಕ್ತಿತ್ವವನ್ನು ಮೂರು ಹಂತಗಳಲ್ಲಿ ಸಂಗ್ರಹಿಸಲಾಗಿದ್ದು, ಮೊದಲನೆಯ ಬದುಕು ಭಾಗದಲ್ಲಿ ಅವರ ಬದುಕಿನ ಪ್ರಾಥಮಿಕ ವಿವರ, ಆತ್ಮನಿವೇದನೆ, ವೈಯಕ್ತಿಕ ಒಡನಾಟಗಳ ಮೂಲಕ ವಿವರಗಳನ್ನು ತೆರೆದಿಡಲಾಗಿದೆ. ಶಿವಪ್ರಕಾಶ್ ಅವರನ್ನು ಕವಿಯಾಗಿ ರೂಪಿಸಿದ ಅವರ ಬಾಲ್ಯ, ಪರಿಸರ, ಒಡನಾಟಗಳ ಕಥನಗಳು ಇಲ್ಲಿವೆ. ವಿವಿಧ ಸಾಹಿತಿಗಳು, ಲೇಖಕರ ಮೂಲಕವೂ ಶಿವಪ್ರಕಾಶ್ ಅವರನ್ನು ಕಟ್ಟಿಕೊಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಎರಡನೇ ಅಧ್ಯಾಯ ಅವರ ಬರಹಗಳಿಗೆ ಮೀಸಲಾಗಿದೆ. ಕಾವ್ಯ, ನಾಟಕ, ವಿಮರ್ಶ, ಆತ್ಮಕಥೆ, ಅನುವಾದ, ಸಂಪಾದನೆ, ಅಂಕಣ ಬರಹ ಹೀಗೆ ಶಿವಪ್ರಕಾಶ್ ತೊಡಗಿಕೊಂಡಿರುವ ಅಗಾಧ ಸಾಹಿತ್ಯಕ ಕಾರ್ಯಗಳನ್ನು ಬೇರೆ ಬೇರೆ ನೆಲೆಗಳಲ್ಲಿ ಪರಿಚಯಿಸಲಾಗಿದೆ. ಮೂರನೇ ಅಧ್ಯಾಯದಲ್ಲಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ತಂದುಕೊಟ್ಟ 'ಮಬ್ಬಿನ ಹಾಗೆ ಕಣಿವೆಯಾಸಿ' ಕೃತಿಯನ್ನು ಮುಖ್ಯವಾಗಿಟ್ಟುಕೊಂಡು ವಿಶ್ಲೇಷಿಸಲಾಗಿದೆ.
©2024 Book Brahma Private Limited.