ಪ್ರೇಮ ಕವಿ ಎಂದೇ ಹೆಸರಾಗಿರುವ ಕೆ.ಎಸ್. ನರಸಿಂಹಸ್ವಾಮಿಯವರು ಜನಪ್ರಿಯತೆಯ ಉತ್ತುಂಗಕ್ಕೇರಿದ ಆಧುನಿಕ ಕನ್ನಡ ಕವಿಗಳಲ್ಲಿ ಒಬ್ಬರು. ಆಧುನಿಕ ಕಾವ್ಯಪ್ರಕಾರದ ವಿವಿಧ ಘಟ್ಟಗಳ ಪ್ರತೀಕವಾಗಿರುವ ಸಾಹಿತ್ಯ ಪಂಥಗಳನ್ನು ಪ್ರತಿನಿಧಿಸುವಂಥ ಸಾಹಿತ್ಯವನ್ನು ಸೃಷ್ಟಿಸಿದವರು. ಗದ್ಯ ಸಾಹಿತ್ಯಕ್ಕೂ ಕೆಲವೊಂದು ಸುಂದರ ಕೃತಿಗಳನ್ನು ನೀಡಿರುವಂಥವರು. ಅನುವಾದದ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು, ಉತ್ತಮವೂ ಅರ್ಥಪೂರ್ಣವೂ ಆಗಿರುವಂಥ ಕಾಣಿಕೆಗಳನ್ನು ಸಲ್ಲಿಸಿರುವಂಥವರು. ಅವರ ’ತೆರೆದ ಬಾಗಿಲು’ ಕವನ ಸಂಕಲನಕ್ಕೆ 1977ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಂದಿದೆ.
ಕೆ. ಎಸ್. ನರಸಿಂಹಸ್ವಾಮಿಯವರ ಬದುಕು ಮತ್ತು ಬರಹವನ್ನು ಪ್ರಸ್ತುತ ಕೃತಿಯಲ್ಲಿ ಕಟ್ಟಿಕೊಡಲಾಗಿದೆ. ವಿಮರ್ಶಕ, ಸಂಶೋಧಕ ಹಾಗೂ ಜಾನಪದ ತಜ್ಞರೂ ಆದ ಡಾ. ರಾಮೇಗೌಡ (ರಾಗೌ) ಅವರು ನವಕರ್ನಾಟಕ ಪ್ರಕಾಶನಕ್ಕಾಗಿ ’ಮಲ್ಲಿಗೆ ಕವಿ’ಯನ್ನು ಪರಿಚಯಿಸಿದ್ದಾರೆ.
©2024 Book Brahma Private Limited.