ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ಮೂಲತಃ ಸಾಹಿತಿಯಾಗಿದ್ದರೂ, ವಿಜ್ಞಾನ ಮತ್ತು ಇತರ ಕೆಲವು ಸಾಹಿತ್ಯೇತರ ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಂಡ ವಿಶಿಷ್ಟ ಲೇಖಕರು. ಕನ್ನಡ ಕಥೆ-ಕಾದಂಬರಿಗಳ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲುಗಳನ್ನೇ ನೆಟ್ಟ ತೇಜಸ್ವಿ ಅವರು ವಿಶಿಷ್ಟ ಪ್ರವಾಸ ಕಥನ, ಬೇಟೆ ಸಾಹಿತ್ಯ ಹಾಗೂ ಅನುವಾದಿತ ಕೃತಿಗಳಿಂದ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಹಾದಿಯನ್ನು ನಿರ್ಮಿಸಿಕೊಂಡು ಹೊರಟವರು, ಯಶಸ್ಸನ್ನು ಪಡೆದವರು. ತೇಜಸ್ವಿಯವರು 1987ರಲ್ಲಿ ‘ಚಿದಂಬರ ರಹಸ್ಯ‘ ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಅವರನ್ನು ಅರಸಿ ಬಂದಿದೆ.
ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಬದುಕು ಮತ್ತು ಸಾಧನೆಯನ್ನು ಪರಿಚಯುಸುವ ಈ ಕೃತಿಯ ಲೇಖಕರು ಎಚ್.ಎಂ. ಮಹೇಶ್ವರಯ್ಯ.
©2024 Book Brahma Private Limited.