ರಹಮತ್ ತರೀಕೆರೆ

Author : ರಂಗನಾಥ ಕಂಟನಕುಂಟೆ

Pages 132

₹ 60.00




Year of Publication: 2012
Published by: ನವಕರ್ನಾಟಕ ಪ್ರಕಾಶನ
Address: ನವಕರ್ನಾಟಕ ಪಬ್ಲಿಕೇಷನ್ಸ್‌ (ಪ್ರೈ.) ಲಿ. ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: (080-22203580/01/02)

Synopsys

ಕನ್ನಡದ ಪ್ರಸಿದ್ಧ ಸಂಶೋಧಕ, ವಿಮರ್ಶಕ ಹಾಗೂ ಚಿಂತಕ ರಹಮತ್‌ ತರೀಕೆರೆ. ’ಕತ್ತಿಯಂಚಿನ ದಾರಿ’ ವಿಮರ್ಶಾ ಕೃತಿಗೆ 2010ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

’ಇಲ್ಲಿ ಯಾರೂ ಮುಖ್ಯರಲ್ಲ’ ’ಮಾತು ತಲೆಯೆತ್ತುವ ಬಗೆ’ ಇವು ಇವರ ಪ್ರಮುಖ ಕೃತಿಗಳು. ’ಕರ್ನಾಟಕ ಸೂಫಿಗಳು’, ’ಅಂಡಮಾನ್ ಕನಸು’ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ದೊರೆತಿದೆ.  

ಲೇಖಕ ಡಾ. ರಂಗನಾಥ ಕಂಟನಕುಂಟೆ ಅವರು ನವಕರ್ನಾಟಕ ಪ್ರಕಾಶನಕ್ಕಾಗಿ  ತರೀಕೆರೆ ಅವರ ಬದುಕನ್ನು ಪರಿಚಯಿಸುವ ಈ ಕೃತಿ ರಚಿಸಿಕೊಟ್ಟಿದ್ದಾರೆ. 

About the Author

ರಂಗನಾಥ ಕಂಟನಕುಂಟೆ

ಕವಿ, ಲೇಖಕ, ಚಿಂತಕರಾದ ರಂಗನಾಥ ಕಂಟನಕುಂಟೆಯವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಕಂಟನಕುಂಟೆಯಲ್ಲಿ ಪೂರ್ಣಗೊಳಿಸಿದ ರಂಗನಾಥ್ ಅವರು ಸರ್ಕಾರಿ ಪದವಿ ಪೂರ್ಣ ಕಾಲೇಜು ದೊಡ್ಡಬಳ್ಳಾಪುರದಲ್ಲಿ ಪಿಯುಸಿ ಮುಗಿಸಿ, ಶ್ರೀಕೊಂಗಾಡಿಯಪ್ಪ ಕಾಲೇಜಿನಲ್ಲಿ ಐಚ್ಛಿಕ ಕನ್ನಡದಲ್ಲಿ ಪದವಿ ಪಡೆದಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ.ಎ ಪದವಿ ಪಡೆದ ಅವರು ಆನಂತರದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಜನಭಾಷೆ ಮತ್ತು ಪ್ರಭುತ್ವ ಭಾಷೆಗಳ ನಡುವಿನ ಸಂಘರ್ಷದ ನೆಲೆಗಳು ಎಂಬ ವಿಷಯದಡಿ ತಮ್ಮ ಪಿಎಚ್.ಡಿ ಮುಗಿಸಿದ್ದಾರೆ. ಕಳೆದ ಇಪತ್ತು ವರ್ಷಗಳಿಂದ ಅಧ್ಯಾಪಕರಾಗಿ ...

READ MORE

Reviews

(ಹೊಸತು, ಫೆಬ್ರವರಿ 2013, ಪುಸ್ತಕದ ಪರಿಚಯ)

'ನವಕರ್ನಾಟಕ ಸಾಹಿತ್ಯ ಸಂಪದ' ಮಾಲೆಯಲ್ಲಿ ಸೇರ್ಪಡೆಗೊಂಡ ಈ ಪುಸ್ತಕವು ನಾಡಿನ ಪ್ರಸಿದ್ಧ ಲೇಖಕರೂ, ಹೊಸ ಚಿಂತನೆಯ ಹರಿಕಾರರೂ ಆಗಿರುವ ರಹಮತ್‌ ತರೀಕೆರೆ ಅವರ ಬದುಕು - ಬರಹಗಳ ಕುರಿತದ್ದಾಗಿದೆ. 'ಕತ್ತಿಯಂಚಿನ ದಾರಿ' ಕೃತಿಗೆ ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಪಡೆದಿರುವ ಇದರ ಬಾಳದಾರಿಯೂ ಕತ್ತಿಯಂಚಿನ ಮೇಲಿನ ನಡೆಯೇ ಆಗಿರುತ್ತದೆ. ತಮ್ಮ ಓದು-ಪ್ರವಾಸಗಳಿ೦ದ ವಿವಿಧ ಅನುಭವಗಳನ್ನು ಗಳಿಸಿದ. ರಹಮತ್ ಒಳ್ಳೆಯ ಸಾಹಿತ್ಯವನ್ನು ಕನ್ನಡಿಗರಿಗೆ ನೀಡಿ ಆದರಣೀಯ ಬರಹಗಾರರಾಗಿ ಹೊಮ್ಮಿದ್ದಾರೆ, ಯಾವುದೇ ಮುಲಾಜಿಗೆ ಒಳಗಾಗದೆ ತನ್ನ ನಿಲುವನ್ನು ನಿಷ್ಟುರವಾಗಿ ಪ್ರತಿಪಾದಿಸಿ, ನಿರ್ಭಿಡೆಯಿಂದ ಬರೆಯಬಲ್ಲವರಿವರು. ಸಾಂಸ್ಕೃತಿಕ ಮುಖಾಮುಖಿಯಿಂದ ಹೊಸ ಆಯಾಮದನ್ನೇ ಸೃಷ್ಟಿಸಿ, ವಿವಿಧ ಪ್ರಕಾರಗಳಲ್ಲಿ ಬರವಣಿಗೆ ರೂಢಿಸಿಕೊಂಡು, ವಿಶ್ವವಿದ್ಯಾಲಯದಲ್ಲಿ ಸಾಹಿತ್ಯಯೋಜನೆಗಳನ್ನು ಸಾಕಾರಗೊಳಿಸಿ ಜನಪ್ರಿಯರಾಗಿದ್ದಾರೆ. ಆರೋಗ್ಯಕರ ವಾಗ್ವಾದಗಳನ್ನು ಹುಟ್ಟುಹಾಕಿ ಸಾಹಿತ್ಯ ಸಮುದ್ರವನ್ನು ಮಥಿಸಿದ್ದಾರೆ. ಹೊಸ ಚಿಂತನೆಯ ನವನೀತ ನಮಗಿತ್ತಿದ್ದಾರೆ. ಇವರ ಬದುಕು-ಬರಹ ವೃತ್ತಿಜೀವನ, ಇವರನ್ನರಸಿಬಂದ ಪ್ರಶಸ್ತಿ-ಪುರಸ್ಕಾರಗಳು, ವ್ಯಕ್ತಿಗತ ಸಾಧನೆಗಳು - ಇವೇ ಮುಂತಾದ ವಿವರಗಳನ್ನು ಸಂಗ್ರಹಿಸಿ ದಾಖಲಿಸಿ ಕೃತಿರಚನೆ ಮಾಡಿದವರು ಸಾ|| ರಂಗನಾಥ ಕಂಟವರುಂಟೆ, ಪ್ರತಿಭೆಯದುರಿಗೆ ಇನ್ನೊಂದು ಪ್ರತಿಭೆ. ಭೇಟಿಯಾದಲ್ಲಿ ಪರಸ್ಪರ ಗೌರವ ಮೂಡುವಂತೆ, ರಹಮತ್‌ ಬಗ್ಗೆ ಬರೆದು ಅವರನ್ನು ತಿಳಿದುಕೊಳ್ಳಲು ಇದೇ ಸೂಕ್ತ ಪುಸ್ತಕ' ಎಂದೆನ್ನುವಂತೆ ಇದನ್ನು ರಚಿಸಿಕೊಟ್ಟಿದ್ದಾರೆ.

Related Books