ರಂ.ಶ್ರೀ. ಮುಗಳಿಯವರು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತರಾದ ಎರಡನೆಯ ಕನ್ನಡಿಗರು. ಮುಗಳಿಯವರು ರಚಿಸಿದ ’ಕನ್ನಡ ಸಾಹಿತ್ಯ ಚರಿತ್ರೆ’ ಕನ್ನಡ ಸಾಹಿತ್ಯ ಲೋಕದಲ್ಲೊಂದು ಮೈಲುಗಲ್ಲು. ವೈಜ್ಞಾನಿಕವಾದ, ವ್ಯವಸ್ಥಿತವಾದ, ಆಧಾರಪೂರ್ವಕವಾದ ಹಾಗೂ ವಸ್ತು ನಿಷ್ಟವಾದ ಮೊಟ್ಟಮೊದಲ ಸಾಹಿತ್ಯ ಚರಿತ್ರೆಯನ್ನು ಕನ್ನಡಕ್ಕೆ ನೀಡಿದ್ದು ಅವರ ಜೀವಮಾನದ ಸಾಧನೆಯಾಗಿದೆ. ಕವಿಯಾಗಿ, ನಾಟಕಕಾರರಾಗಿ, ಕಾದಂಬರಿಕಾರರಾಗಿ, ಸಂಪಾದಕರಾಗಿ ಅವರು ನೀಡಿರುವ ಕಾಣಿಕೆಯೂ ಮಹತ್ವವಾದದ್ದು. ಮುಗಳಿಯವರು 1956ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತಮ್ಮ"ಕನ್ನಡ ಸಾಹಿತ್ಯ ಚರಿತ್ರೆ" ಕೃತಿಗೆ ಪಡೆದರು.
ಇದು ರಂ.ಶ್ರೀ. ಮುಗಳಿಯವರ ಬದುಕು ಮತ್ತು ಬರಹವನ್ನು ಪರಿಚಯಿಸುವ ಕೃತಿಯಾಗಿದ್ದು, ಡಾ. ತಾಳ್ತಜೆ ವಂಸತಕುಮಾರ ಕೃತಿಯನ್ನು ಬರೆದಿದ್ದಾರೆ.
©2024 Book Brahma Private Limited.