ಡಾ. ಎಂ. ಚಿದಾನಂದ ಮೂರ್ತಿ ಅವರು ಮೂಲತಃ ಕನ್ನಡ ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನೆಗಳಿಗೆ ತಮ್ಮನ್ನು ಮೀಸಲಾಗಿರಿಸಿಕೊಂಡಿರುವಂಥವರು. ತಮ್ಮ ಕನ್ನಡ ಪರ ಕಾಳಜಿಗಳಿಂದಾಗಿ ಕನ್ನಡ ಪ್ರಾಧ್ಯಾಪಕರಲ್ಲಿಯೇ ವಿರಳರೂ, ವಿಶಿಷ್ಟರೂ ಆದವರು. ಛಂದಸ್ಸು, ಗ್ರಂಥ ಸಂಪಾದನೆ, ಶಾಸನ, ಸಂಸ್ಕೃತಿ, ಸಾಹಿತ್ಯ ಚರಿತ್ರೆ, ಭಾಷಾ ವಿಜ್ಞಾನ, ಜಾನಪದ - ಇಂಥ ಹಲವು ಕ್ಷೇತ್ರಗಳಲ್ಲಿ ಕೆಲಸಮಾಡಿದ ಪ್ರಮುಖ ವಿದ್ವಾಂಸರು. ತಮ್ಮ "ಹೊಸತು ಹೊಸತು" ಕೃತಿಗೆ 1997ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಸಂದಿದೆ.
ಕೃತಿಯು ಡಾ. ಎಂ. ಚಿದಾನಂದ ಮೂರ್ತಿಯವರನ್ನು ಪರಿಚಯಾತ್ಮಕವಾಗಿ ವಿವರಿಸುತ್ತದೆ. ಗುಲಬರ್ಗಾ ವಿಶ್ವವಿದ್ಯಾಲಯದ ಭಾಷಾವಿಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ. ಸಂಗಮೇಶ ಸವದತ್ತಿಮಠ ಈ ಪುಸ್ತಕದ ಲೇಖಕರು.
©2024 Book Brahma Private Limited.