’ಸ್ವಪ್ನ ಸಾರಸ್ವತ’ ಎಂಬ ಅನನ್ಯ ಕೃತಿಯೊಂದನ್ನು ಕನ್ನಡಕ್ಕೆ ನೀಡುವ ಮೂಲಕ ಮನೆಮಾತಾದವರು ಗೋಪಾಲಕೃಷ್ಣ ಪೈ. ಸಮುದಾಯವೊಂದು ಬಲವಂತವಾಗಿ ಊರು ತೊರೆದ ಕತೆಯನ್ನು ತಮ್ಮ ಅದ್ಭುತ ಪ್ರತಿಭೆ ಎರಕ ಹೊಯ್ದು ಪೈ ಕಟ್ಟಿಕೊಟ್ಟಿದ್ದಾರೆ. ಬ್ಯಾಂಕ್ ಉದ್ಯೊಗಿಯಾಗಿದ್ದ ಅವರು ಅಲ್ಲಿ ಕೇಳಿದ ಗೌಡ ಸಾರಸ್ವತ ಬ್ರಾಹ್ಮಣರ ತಲೆಮಾರುಗಳ ಹಿಂದಿನ ಬದುಕನ್ನು ಚಿತ್ರಿಸಿದ್ದಾರೆ. ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಂದಿದೆ.
’ತಿರುವು’, ’ಈ ಬೆರಳ ಗುರುತು’, ’ಹಾರುವ ಹಕ್ಕಿಯ ಗೂಡಿನ ದಾರಿ’,’ಆಧುನಿಕ ಚೀನೀ ಸಣ್ಣಕತೆಗಳು’ ಅವರ ಇತರ ಮುಖ್ಯ ಕೃತಿಗಳು. ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನಡುವೆ ಇರುವ ಪೆರ್ಲ, ಪೈ ಅವರ ಹುಟ್ಟೂರು. ನವ ಕರ್ನಾಟಕ ಪ್ರಕಾಶನಕ್ಕಾಗಿ ಪೈ ಜೀವನವನ್ನು ರಚಿಸಿಕೊಟ್ಟಿದ್ದಾರೆ ಡಾ. ಗೀತಾ ಶೆಣೈ.
©2025 Book Brahma Private Limited.