ಎ.ಆರ್. ಕೃಷ್ಣಶಾಸ್ತ್ರಿ ಕನ್ನಡ ಮತ್ತು ಸಂಸ್ಕೃತ ಭಾಷೆಗಳ ಜೊತೆಗೆ ಅನುಸಂಧಾನ ನಡೆಸಿದವರು. ಕನ್ನಡದ ಅಶ್ವಿನಿ ಕುಮಾರರಲ್ಲಿ ಒಬ್ಬರು ಎಂದೇ ಕರೆಸಿಕೊಂಡವರು. ಕನ್ನಡದ ಹಲವಾರು ಹಿರಿಯ-ಕಿರಿಯ ಲೇಖಕರನ್ನು ಬೆಳಕಿಗೆ ತಂದ ಕೀರ್ತಿ ಶಾಸ್ತ್ರಿಗಳಿಗೆ ಸಲ್ಲುತ್ತದೆ. ವಿಮರ್ಶೆಯ ಸ್ವರೂಪ ಮತ್ತು ಮಾನದಂಡಗಳನ್ನು ಹಾಕಿಕೊಟ್ಟ ಹಿರಿಮೆಯೂ ಅವರದು. ಆಳವಾದ ವಿದ್ವತ್ತು, ವಿಮರ್ಶನ ದೃಷ್ಟಿ ಮತ್ತು ಔಚಿತ್ಯ ಪ್ರಜ್ಞೆಗಳ ಪ್ರತೀಕವಾಗಿದೆ ಅವರ ಸಾಹಿತ್ಯ ಕೃಷಿ.
ಅವರ "ಬಂಗಾಳಿ ಕಾದಂಬರಿಕಾರ ಬಂಕಿಮ ಚಂದ್ರ" ಕೃತಿಗೆ 1961ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿತು. ಕೃಷ್ಣಶಾಸ್ತ್ರಿಗಳ ಬದುಕು ಮತ್ತು ಬರಹವನ್ನು ಪರಿಚಯಿಸುವ ಪ್ರಸ್ತುತ ಕೃತಿಯನ್ನು ಲೇಖಕ ಬಿ. ವಿ. ಶ್ರೀಧರ ರಚಿಸಿದ್ದಾರೆ.
©2025 Book Brahma Private Limited.