ಆಧುನಿಕ ಕನ್ನಡ ಸಾಹಿತ್ಯಲೋಕದಲ್ಲಿ ನವ್ಯ ಕಾವ್ಯಮಾರ್ಗವನ್ನು ರೂಪಿಸಲು ಪ್ರಯತ್ನಿಸಿದವರು ಬಿ.ಸಿ ರಾಮಚಂದ್ರ. ‘ಹೃದಯಗೀತ’, ‘ಏಳುಸುತ್ತಿನ ಕೋಟೆ’, ‘ಬುವಿ ನೀಡಿದ ಸ್ಫೂರ್ತಿ’, ‘ಹೇಸರಗತ್ತೆ’, ‘ಬ್ರಾಹ್ಮಣ ಹುಡುಗ’, ‘ಮಾತು-ಮಾಟ’, ‘ದೆಹಲಿಗೆ ಬಂದ ಹೊಸ ವರ್ಷ’, ‘ಸಪ್ತಪದಿ’ ಅವರ ಪ್ರಮುಖ ಕವಿತಾ ಸಂಕಲನಗಳು.
’ಸಪ್ತಪದಿ’ ಕೃತಿಗೆ 1998ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ನಾಟಕ, ಕತೆಗಳು, ಅನುವಾದ ಪ್ರಕಾರಗಳಲ್ಲೂ ಕೆಲಸ ಮಾಡಿದ್ದಾರೆ. ’ನೆರಳು’ ನಾಟಕಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ’ಸೆರಗಿನ ಕೆಂಡ’ ಕೃತಿಗೆ ಅಖಿಲ ಭಾರತ ಬಹುಮಾನ ಲಭಿಸಿದೆ. ಮನಶಾಸ್ತ್ರ ಅವರ ಮತ್ತೊಂದು ಆಸಕ್ತಿಯ ಕ್ಷೇತ್ರ.
ರಾಮಚಂದ್ರಶರ್ಮರ ಬಾಲ್ಯ, ಅವರ ಸಾಹಿತ್ಯ ಕೃಷಿ, ಸಾಧನೆಗಳನ್ನು ಕುರಿತ ದಟ್ಟ ವಿವರಗಳು ಈ ಕೃತಿಯಲ್ಲಿವೆ.
©2024 Book Brahma Private Limited.