ಹೆಗ್ಗೋಡಿನಂತಹ ಸಣ್ಣ ಹಳ್ಳಿಯನ್ನು ವಿಶ್ವವೇ ನಿಬ್ಬೆರಗಾಗುವಂತೆ ಮಾಡಿದವರು ಕೆ.ವಿ. ಸುಬ್ಬಣ್ಣ. ಅವರ ನೀಲಕಂಠ ನಾಟ್ಯಸಂಘ ಭಾರತೀಯ ರಂಗಭೂಮಿಯ ಪ್ರಮುಖ ಮೈಲುಗಲ್ಲು. ಸುಬ್ಬಣ್ಣನವರ ಆಸಕ್ತಿಯ ಕ್ಷೇತ್ರಗಳು ಹಲವು.
’ಗಾರ್ಗಿಯ ಕಥೆಗಳು’ ’ರಾಜಕೀಯದ ಮಧ್ಯೆ ಬಿಡುವು’, ’ಅಭಿಜ್ಞಾನ ಶಾಕುಂತಲ’, ’ಸೂಳೆ ಸನ್ಯಾಸಿ’ ಇವು ಸುಬ್ಬಣ್ಣನವರ ಪ್ರಮುಖ ನಾಟಕಗಳು. ’ಅರೆ ಶತಮಾನದ ಅಲೆ ಬರಹಗಳು’ ಅವರ ಚಿಂತನ ಕೃತಿ. ’ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು’ ಸಾಹಿತ್ಯಿಕ ಗ್ರಂಥ.
ಫಿಲಿಪ್ಪೀನ್ ಸರ್ಕಾರದ ರಮೊನ್ ಮ್ಯಾಗ್ಸೆಸ್ಸೆ ಪುರಸ್ಕಾರ,’ಕಾಳಿದಾಸ್ ಸಮ್ಮಾನ್’ ಕೇಂದ್ರ ಸರ್ಕಾರದ ಪದ್ಮಶ್ರೀ ಪುರಸ್ಕಾರಕ್ಕೆ ಪಾತ್ರರಾದ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಮತ್ತೊಂದು ಕೊಡುಗೆ ಅಕ್ಷರ ಪ್ರಕಾಶನ. ತಮ್ಮ ಪ್ರಕಾಶನದ ಮೂಲಕ ೫೦೦ಕ್ಕೂ ಹೆಚ್ಚು ವಿಶಿಷ್ಟ ಕೃತಿಗಳನ್ನು ಅವರು ಪ್ರಕಟಿಸಿದ್ದಾರೆ.’ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರೆತಿದೆ.
ನವಕರ್ನಾಟಕ ಪ್ರಕಾಶನ ಹೊರತಂದಿರುವ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತರ ಮಾಲಿಕೆಗಾಗಿ ಸುಬ್ಬಣ್ಣವರ ಜೀವನ ಚಿತ್ರಣ ಒದಗಿಸಿದ್ದಾರೆ ಸಾಹಿತಿ ಡಾ. ನಾ. ದಾಮೋದರ ಶೆಟ್ಟಿ.
©2024 Book Brahma Private Limited.