’ಗಂಗವ್ವ ಗಂಗಾಮಾಯಿ’, ’ಅವಧೇಶ್ವರಿ’, ’ಮಾಯಿಯ ಮೂರು ಮುಖಗಳು’ ರೀತಿಯ ಭಿನ್ನ ಕಾದಂಬರಿಗಳನ್ನು ನೀಡಿದ ಶಂಕರ ಮೊಕಾಶಿ ಪುಣೇಕರ, ಉತ್ತಮ ವಿಮರ್ಶಕರು ಕೂಡ.
’ಬೇಂದ್ರೆಯವರ ಕಾವ್ಯ ಮೀಮಾಂಸೆ’, ‘ನಟ ನಾರಾಯಣಿ’, ‘ಸಾಹಿತ್ಯ ಮತ್ತು ಅಭಿರುಚಿ’, ಹಾಗೂ ‘ಡೆರಿಕ್ ಡಿಸೋಜಾ ಮತ್ತು ಇತರ ಕಥೆಗಳು’ - ಇವು ಮೊಕಾಶಿಯವರ ಇತರ ಮಹತ್ವದ ಕೃತಿಗಳು.
ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಇವರ 35ಕ್ಕೂ ಹೆಚ್ಚು ಕೃತಿಗಳು ಪ್ರಕಟಿತ. ’ಅವಧೇಶ್ವರಿ’ಗೆ 1988ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.
ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿ ಅವರ ಬದುಕಿನ ಹಲವು ಮಗ್ಗಲುಗಳನ್ನು ಪರಿಚಯಸುತ್ತದೆ. ಡಾ. ಜಿ.ಎನ್. ಉಪಾಧ್ಯ ಪುಸ್ತಕದ ಲೇಖಕರು.
©2024 Book Brahma Private Limited.