ಕೀರ್ತಿನಾಥ ಕುರ್ತಕೋಟಿ ವಿಮರ್ಶೆ ಮತ್ತು ಅನುವಾದ ಕ್ಷೇತ್ರಗಳೆರಡರಲ್ಲಿ ಪ್ರಮುಖ ಹೆಸರು. ಲೇಖಕರ ಒಂದು ಪಡೆಯನ್ನೇ ಬೆಳೆಸಿದ್ದಕ್ಕಾಗಿಯೂ ಅವರು ಸ್ಮರಣೀಯರಾಗಿದ್ದಾರೆ. ಸಂಪಾದನೆ, ಅನುವಾದ, ಅಂಕಣ ಬರೆಹಗಳ ಕ್ಷೇತ್ರಗಳಲ್ಲಿ ಅವರ ಸೇವೆ ಗಮನಾರ್ಹವಾಗಿದ್ದರೂ ನಾಟಕ ಮತ್ತು ವಿಮರ್ಶೆ ಅವರ ಪ್ರಧಾನ ಕ್ಷೇತ್ರಗಳು. ಅವರ ವಿಮರ್ಶಾ ಕೃತಿಗಳು ಆಧುನಿಕ ಕನ್ನಡ ವಿಮರ್ಶೆಯ ಕ್ಷೇತ್ರಕ್ಕೆ ಹೊಸ ಚೈತನ್ಯ-ಸ್ಫೂರ್ತಿಗಳನ್ನು ನೀಡಿವೆ.ಕೀರ್ತಿನಾಥ ಕುರ್ತಕೋಟಿಯವರಿಗೆ ’ಉರಿಯ ನಾಲಗೆ’ ವಿಮರ್ಶಾ ಕೃತಿಗೆ 1995ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿದೆ.
ಈ ಪುಸ್ತಕದಲ್ಲಿ ಕೃಷ್ಣಮೂರ್ತಿ ಚಂದರ್ ಅವರು ಕೀರ್ತಿನಾಥ ಕುರ್ತಕೋಟಿಯವರ ಜೀವನ ಮತ್ತು ಸಾಧನೆಯನ್ನು ಕಟ್ಟಿಕೊಟ್ಟಿದ್ದಾರೆ.
©2025 Book Brahma Private Limited.