’ಮೋಹನ ಮುರಲಿ’, ’ಭೂಮಿಗೀತ’, ’ಧೂಮಲೀಲೆ’ ಮೂಲಕ ಪ್ರಸಿದ್ಧರಾದ ಗೋಪಾಲಕೃಷ್ಣ ಅಡಿಗರು ಕನ್ನಡ ನವ್ಯಕಾವ್ಯದ ಪ್ರವರ್ತಕರು. ಆಧುನಿಕ ಕನ್ನಡ ವಿಮರ್ಶೆಯನ್ನು ಬೆಳೆಸುವಲ್ಲಿ ಅವರು ಸಲ್ಲಿಸಿರುವ ಸೇವೆ ಅವಿಸ್ಮರಣೀಯ. ಸೃಜನಶೀಲ ಲೇಖಕರಾಗಿ, ಅನುವಾದಕರಾಗಿ ಅವರು ಕನ್ನಡವನ್ನು ಬೆಳೆಸಿದ್ದಾರೆ, ಪೋಷಿಸಿದ್ದಾರೆ. ಒಂದು ಸಾಹಿತ್ಯ ಪಂಥದ ಅವಿಸ್ಮರಣೀಯ ಭಾಗವಾಗಿದ್ದು ಹಾಗೂ ಆ ಪಂಥ ಬೆಳೆದು ನಿಲ್ಲುವಲ್ಲಿ ಮಹತ್ವದ ಪ್ರಭಾವ ಬೀರಿದ್ದು ಅಡಿಗರ ಪ್ರಮುಖ ಸಾಧನೆ. ಅವರ ’ವರ್ಧಮಾನ’ ಕವನ ಸಂಕಲನ 1974ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೆ ಪಾತ್ರವಾಯಿತು.
ಪ್ರಸ್ತುತ ಕೃತಿಯಲ್ಲಿ ಗೋಪಾಲಕೃಷ್ಣ ಅಡಿಗರ ಜೀವನ ಮತ್ತು ಸಾಧನೆಯನ್ನು ವಿವರಿಸಲಾಗಿದ್ದು, ಬಾಲಸುಬ್ರಹ್ಮಣ್ಯ ಕಂಜರ್ಪಣೆ ಕೃತಿ ರಚಿಸಿದ್ದಾರೆ.
©2024 Book Brahma Private Limited.