’ಹಳ್ಳ ಬಂತು ಹಳ್ಳ’, ’ಮನಸುಖರಾಯನ ಮನಸು’ ಮುಂತಾದ ಕೃತಿಗಳ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಶ್ರೀನಿವಾಸ ವೈದ್ಯ ’ಅಪರಂಜಿ’ ಪತ್ರಿಕೆಗೆ ಹಾಸ್ಯ ಲೇಖನಗಳನ್ನು ಬರೆಯುತ್ತಿದ್ದರು ಎಂದರೆ ಅಚ್ಚರಿ ಎನಿಸಬಹುದು.
ಬ್ಯಾಂಕ್ ಉದ್ಯೋಗಿಯಾಗಿದ್ದ ವೈದ್ಯ ಅವರು ಮುಂಬೈ, ಗೋವೆ, ಚೆನ್ನೈನಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ೧೯೯೭ರಲ್ಲಿ ಅವರು ಸ್ಥಾಪಿಸಿದ್ದು ’ಸಂವಾದ’ ಟ್ರಸ್ಟ್.
’ಹಳ್ಳ ಬಂತು ಹಳ್ಳ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ದೊರೆತಿವೆ.
ವೈದ್ಯ ಅವರ ಬದುಕನ್ನು ಈ ಕೃತಿ ಮೂಲಕ ಲೇಖಕಿ ಮಾಲತಿ ಪಟ್ಟಣಶೆಟ್ಟಿ ಪರಿಚಯಿಸಿಕೊಟ್ಟಿದ್ದಾರೆ.
©2024 Book Brahma Private Limited.