ಕನ್ನಡದ ಅನನ್ಯ ವಿಮರ್ಶಕರಲ್ಲಿ ಒಬ್ಬರಾಗಿದ್ದ ಡಿ.ಆರ್. ನಾಗರಾಜ ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಮಿಂಚಬಹುದಾಗಿದ್ದ ಪ್ರತಿಭೆ. ಅವರ ಅಕಾಲಿಕ ಮರಣ ಕನ್ನಡ ಲೋಕವನ್ನು ಬರಡಾಗಿಸಿದ್ದು ಸುಳ್ಳಲ್ಲ.
’ಅಮೃತ ಮತ್ತು ಗರುಡ’, ’ಶಕ್ತಿ ಶಾರದೆಯ ಮೇಳ’, 'The flaming poet', ’ನಾಗಾರ್ಜುನ’, 'Recreating each other', ’ಸಾಹಿತ್ಯ ಕಥನ’, ’Shiva’s plight’, ’ಅಲ್ಲಮಪ್ರಭು ಮತ್ತು ಶೈವ ಪ್ರತಿಭೆ’ ಅವರ ಪ್ರಮುಖ ಕೃತಿಗಳು. ’ಕತ್ತಲೆ ದಾರಿ ಬಹುದೂರ’ ಅವರ ನಾಟಕ ಕೃತಿ.
’ಅಮೃತ ಮತ್ತು ಗರುಡ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿದೆ. ಆರ್ಯಭಟ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ ಅವರಿಗೆ ದೊರೆತ ಇನ್ನಿತರ ಗೌರವಗಳು.
ಅವರ ಬದುಕು ಬರಹವನ್ನು ಈ ಕೃತಿಯ ಮೂಲಕ ಪರಿಚಯಿಸಿದ್ದಾರೆ ಸಾಹಿತಿ ವಿ ಚಂದ್ರಶೇಖರ ನಂಗಲಿ.
©2024 Book Brahma Private Limited.