ಆರ್ ವಿ ಜಾಗೀರದಾರ ಎಂಬ ಹೆಸರಿನವರಾಗಿದ್ದ ಆದ್ಯ ರಂಗಾಚಾರ್ಯರು ’ಶ್ರೀರಂಗ’ರಾಗಿ ಬದಲಾದ ಕತೆಯೇ ಸ್ವಾರಸ್ಯಕರ.
ನಾಟಕ ರಚನೆ ಅವರು ಹೆಚ್ಚು ಒತ್ತು ನೀಡಿದ ಪ್ರಕಾರ. ’ಸ್ವಾರ್ಥತ್ಯಾಗ’, ’ಸಂಧ್ಯಾಕಾಲ’, ’ಕೇಳು ಜನಮೇಜಯ’, ’ಸ್ವರ್ಗಕ್ಕೆ ಮೂರೆ ಬಾಗಿಲು’ ಇವರ ಪ್ರಮುಖ ಕೃತಿಗಳಲ್ಲಿ ಕೆಲವು. ಕಾದಂಬರಿ ಪ್ರಕಾರದಲ್ಲೂ ಕೈಯಾಡಿಸಿರುವ ಅವರು ಭರಮಪ್ಪನ ಭೂತ, ವಿಶ್ವಾಮಿತ್ರನ ಸೃಷ್ಟಿ, ಕುಮಾರ ಸಂಭವ, ಅನಾದಿ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಕರ್ಮವೀರ ಪತ್ರಿಕೆಯಲ್ಲಿ ರಾಜಕೀಯ ಅಂಕಣಗಳನ್ನು ಬರೆಯುತ್ತಿದ್ದ ಅವರು ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ ಮೊದಲಿಗರು ಕೂಡ.
’ಕಾಳಿದಾಸ’ ಕೃತಿಗೆ 1971 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಅವರ ಹೋರಾಟದ ಬದುಕನ್ನು ನವಕರ್ನಾಟಕ ಪ್ರಕಾಶನಕ್ಕಾಗಿ ಅಕ್ಷರಗಳಲ್ಲಿ ಕಟ್ಟಿಕೊಟ್ಟಿದ್ದಾರೆ ಡಾ. ಬಿ.ಎನ್. ಸುಮಿತ್ರಾಬಾಯಿ.
©2025 Book Brahma Private Limited.