ಎ.ಎನ್. ಮೂರ್ತಿರಾವ್ (ಅಕ್ಕಿಹೆಬ್ಬಾಳು ನರಸಿಂಹಮೂರ್ತಿರಾಯರು) ಅವರು ಕನ್ನಡದ ಖ್ಯಾತ ವಿಮರ್ಶಕ ಮತ್ತು ಸಾಹಿತಿ. ಪರಿಪಕ್ವ ಮನಸ್ಸಿನ, ಉದಾರ ಹೃದಯದ, ಆಳವಾದ ಪಾಂಡಿತ್ಯದ, ಆತ್ಮಾವಲೋಕನ ಪ್ರವೃತ್ತಿಯ, ಪುರೋಗಾಮಿ ನಿಲುವಿನ, ಕಲಾತ್ಮಕ ಧ್ಯೇಯ ನಿಷ್ಠೆಯ ಸಾಹಿತಿ. ಕನ್ನಡ ಗದ್ಯ ನಿರ್ಮಾಪಕರಲ್ಲಿ ಒಬ್ಬರಾಗಿರುವ ಅವರು ಸಾಹಿತ್ಯ ಲೋಕದಲ್ಲಿ ಪ್ರಮುಖ ಸಾಹಿತಿ. ಬದುಕು-ಬರೆಹಗಳೆರಡರಲ್ಲಿಯೂ ಅತ್ಯುನ್ನತ ಧ್ಯೇಯ-ಆದರ್ಶಗಳ ಪ್ರತೀಕವಾಗಿದ್ಥಂತಹವರು. ಇವರು ಅನೇಕ ವಿಮರ್ಶ ಬರಹಗಳನ್ನು, ಲಲಿತ ಪ್ರಬಂಧಗಳನ್ನು, ಅನುವಾದಗಳು, ಲೇಖನ ಸಂಗ್ರಹಗಳನ್ನು ರಚಿಸಿದ್ದಾರೆ. ಎ.ಎನ್. ಮೂರ್ತಿರಾವ್ ರಾವ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟದ್ದು ’ಚಿತ್ರಗಳು ಪತ್ರಗಳು’ ಕೃತಿ.
ಎ.ಎನ್. ಮೂರ್ತಿರಾವ್ ಅವರ ಬದುಕು ಮತ್ತು ಸಾಧನೆಯನ್ನು ಪರಿಚಯಿಸುವ ಕೃತಿಯ ಲೇಖಕರು ಶಾಂತಾರಾಮ ಪ್ರಭು.
©2025 Book Brahma Private Limited.