ಪು.ತಿ.ನ. (ಪುರೋಹಿತ ತಿರುನಾರಾಯಣ ನರಸಿಂಹಾಚಾರ್) ಕನ್ನಡ ನವೋದಯ ಕಾಲದ ಪ್ರಮುಖ ಕವಿಗಳಲ್ಲಿ ಒಬ್ಬರು. ಗೀತರೂಪಕಗಳ ಕ್ಷೇತ್ರದಲ್ಲಿನ ಅವರ ಸಾಧನೆ ಅಪೂರ್ವವಾದದ್ದು. ಅವುಗಳು ಗೇಯತೆಯ ಗುಚ್ಛವೇ ಆಗಿವೆ. ಅವರ ಪ್ರಬಂಧಗಳಲ್ಲಿ, ಕಾವ್ಯಮೀಮಾಂಸಾ ಬರಹಗಳಲ್ಲಿ ಮೌಲಿಕ ಚಿಂತನೆ ಗಳಿವೆ.ಕನ್ನಡ ಕಾವ್ಯಲೋಕಕ್ಕೆ ಪು.ತಿ.ನ. ಅವರ ಕೊಡುಗೆ ಅಪಾರವಾದದ್ದು. ಇವರ "ಹಂಸ ದಮಯಂತಿ ಮತ್ತು ಇತರ ರೂಪಕಗಳು" ಕೃತಿಗೆ 1966ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.
ಕನ್ನಡದ ಮತ್ತೊಬ್ಬ ಪ್ರಮುಖ ಲೇಖಕ ಪ್ರಭುಶಂಕರ ಅವರು ಈ ಪುಸ್ತಕದ ಲೇಖಕರು.
©2024 Book Brahma Private Limited.