ಗಿರೀಶ ಕಾರ್ನಾಡ ನಾಟಕ ಕ್ಷೇತ್ರದಲ್ಲಿನ ಅಪೂರ್ವ ಸಾಧನೆಗಾಗಿ ರಾಷ್ಟೀಯ, ಅಂತರರಾಷ್ಟ್ರೀಯ ಖ್ಯಾತಿಯನ್ನು ಗಳಿಸಿರುವಂಥವರು. ಅವರ ನಾಟಕಗಳು ಪುರಾಣ, ಇತಿಹಾಸ ಮತ್ತು ಜಾನಪದ ವಸ್ತು ಮತ್ತು ತಂತ್ರಗಳನ್ನು ಆಶ್ರುಸಿದ್ದರೂ, ರಂಗಸಾಧ್ಯತೆಗಳನ್ನು ವಿಸ್ತರಿಸುವ ಅಪರೂಪದ ಸಾಧನೆಗಳಿಗೆ ಅವನ್ನೇ ಬಳಸಿಕೊಂಡಿವೆ. ಹಳೆಯ ಕಥಾವಸ್ತುಗಳನ್ನೇ ಆಯ್ದುಕೊಂಡಿದ್ದರೂ ಸಮಕಾಲೀನ ಸನ್ನಿವೇಶಗಳಿಗೆ ಹಾಗೂ ಸಮಸ್ಯೆಗಳಿಗೆ ಅವುಗಳನ್ನು ಸಂಬಂಧಿಸಿರುವುದು ಅವರ ವೈಶಿಷ್ಟ್ಯ. ಯಯಾತಿ, ತುಘಲಕ್, ಹಯವದನ, ಅಂಜುಮಲ್ಲಿಗೆ,ನಾಗಮಂಡಲ ಮುಂತದ ಪ್ರಮುಖ ನಾಟಕಗಳನ್ನು ರಚಿಸಿದ ಗಿರೀಶ್ 1994ರಲ್ಲಿ ತಮ್ಮ ‘ತಲೆದಂಡ‘ ನಾಟಕಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೆ ಭಾಜನರಾದರು.
ಪ್ರಸ್ತುತ ಕೃತಿ ಗಿರೀಶ್ ಕರ್ನಾಡ್ ಅವರ ಬದುಕು ಮತ್ತು ಬರಹಗಳ ಪರಿಚಯವಿದೆ. ಮೈಸೂರು ವಿಶ್ವವಿದ್ಯಾಲಯದ ಲಲಿತ ಕಲೆಗಳ ಕಾಲೇಜಿನಲ್ಲಿ ನಾಟಕಶಾಸ್ತ್ರ ವಿಭಾಗದಲ್ಲಿ ಪ್ರವಾಚಕರಾಗಿರುವ ಡಾ. ಮೀರಾ ಮೂರ್ತಿ ಕೃತಿಯ ಲೇಖಕರು.
©2024 Book Brahma Private Limited.