ವಿ.ಕೃ. ಗೋಕಾಕರು (ವಿನಾಯಕ ಕೃಷ್ಣ ಗೋಕಾಕ) ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲಿಯೂ ವಿಫುಲವಾಗಿ ಸಾಹಿತ್ಯ ರಚನೆ ಮಾಡಿದವರು. ಕನ್ನಡ ಆಧುನಿಕ ಸಾಹಿತ್ಯ ನವೋದಯ ಚಳವಳಿಯಿಂದ ನವ್ಯಕ್ಕೆ ಹೊರಳುವಲ್ಲಿ ಅವರ ಪಾತ್ರವೂ ಮಹತ್ವದ್ದಾಗಿತ್ತು. ಕಾವ್ಯ, ನಾಟಕ, ಕಾದಂಬರಿ, ವಿಮರ್ಶೆ, ಪ್ರವಾಸಕಥನ, ಜೀವನಚರಿತ್ರೆ ಮೊದಲಾದ ಪ್ರಕಾರಗಳಲ್ಲಿ ಗಮನಾರ್ಹ ಕೃತಿಗಳನ್ನು ರಚಿಸಿದವರು. ಕನ್ನಡದ ಸ್ಥಾನಮಾನಗಳ ಬಗ್ಗೆ ಅವರು ನೀಡಿದ ವರದಿ ‘ಗೋಕಾಕ್ ವರದಿ‘ ಎಂದೇ ಪ್ರಸಿದ್ಧವಾಗಿದ್ದು, ಅದರಿಂದಾಗಿ ಕರ್ನಾಟಕದಲ್ಲಿ ಮನೆಮಾತಾಗಿದ್ದಾರೆ. ಕನ್ನಡದ ಹಿರಿಮೆಯನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನೆಲೆಯಲ್ಲಿ ಎತ್ತಿಹಿಡಿದಿರುವ ಗೋಕಾಕರು 1960ರಲ್ಲಿ ತಮ್ಮ ‘ದ್ಯಾವಾ-ಪೃಥಿವೀ‘ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ, 1991ರಲ್ಲಿ ‘ಭಾರತ ಸಿಂಧು ರಶ್ಮಿ‘ಗಾಗಿ ಜ್ಞಾನಪೀಠ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.
ವಿ.ಕೃ. ಗೋಕಾಕರ ಜೀವನ ಮತ್ತು ಸಾಧನೆಯನ್ನು ಪರಿಚಯಿಸುವ ಪ್ರಸ್ತುತ ಕೃತಿಯನ್ನು ರಚಿಸಿದವರು ಜೀವಿ ಕುಲಕರ್ಣಿ.
©2024 Book Brahma Private Limited.