ಈ ಹಿಂದೆಲ್ಲ ಯಾವುದು ಉತ್ತಮ ಬರಹ, ಯಾವುದು ಕೆಟ್ಟ ಬರಹ ಎನ್ನುವುದನ್ನು ಪತ್ರಿಕೆಯೊಳಗಿನ ಸಂಪಾದಕ ನಿರ್ಧರಿಸುತ್ತಿದ್ದ ಆತ ಪ್ರಬುದ್ದನಲ್ಲದೇ ಇದ್ದರೆ ಕೆಟ್ಟ ಬರಹಗಳು ಆದ್ಯತೆಯನ್ನು ಪಡೆದು, ಒಳ್ಳೆಯ ಬರಹಗಳು ಮೂಲೆಗುಂಪಾಗುತ್ತಿತ್ತು. ಬರಹಗಾರರಿಗೆ ಸಂಪಾದಕನೆಂಬ ದೊಣ್ಣೆನಾಯಕ ಅನಿವಾರ್ಯವಾಗಿತ್ತು. ಇಂದು ಹಾಗಲ್ಲ. ಎಲ್ಲ ಬರಹಗಾರರಿಗೂ ಸಾಮಾಜಿಕ ತಾಣಗಳು ಮುಕ್ತವಾಗಿ ತೆರೆದುಕೊಂಡಿದೆ. ಯಾವ ಬರಹ ಉತ್ತಮ ಎನ್ನುವುದನ್ನು ನೇರವಾಗಿ ಓದುಗನೇ ನಿರ್ಣಯಿಸುತ್ತಿದ್ದಾನೆ. ಇದರಿಂದ ಹೊಸ ಪ್ರತಿಭಾವಂತ ಬರಹಗಾರರು ಹೊರಹೊಮ್ಮುತ್ತಿದ್ದಾರೆ ಮತ್ತು ಓದುಗರಿಗೆ ನೇರವಾಗಿ ಲಭ್ಯವಾಗುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸಾಮಾಜಿಕ ತಾಣದಲ್ಲಿ ಬರೆದದ್ದೆಲ್ಲ ಕತೆ, ಕವಿತೆಗಳಾಗುತ್ತಿವೆ. ಕವಿ, ಕತೆಗಾರರ ಸಂಖ್ಯೆ ಹೆಚ್ಚುತ್ತಿದೆ. ಆದರೆ ವಿಮರ್ಶೆಗಳು ಮೂಲೆಗುಂಪಾಗುತ್ತಿವೆ. ಲೈಕ್‌ಗಳು, ಅನ್‌ಲೈಕ್‌ಗಳು ವಿಮರ್ಶೆಯ ಸ್ಥಾನವನ್ನು ತುಂಬಿಕೊಂಡಿದೆ. ಇಂತಹ ಹೊತ್ತಿನಲ್ಲಿ ಕನ್ನಡದಲ್ಲಿ ಆಗಿ ಹೋಗಿರುವ ಉತ್ತಮ ವಿಮರ್ಶಕರ ಬಗ್ಗೆ ಹೊಸ ತಲೆಮಾರಿನ ಬರಹಗಾರರು ತಿಳಿದುಕೊಳ್ಳುವುದು ಅತ್ಯಗತ್ಯ. ಈ ಉದ್ಧೇಶದಿಂದ ಹಿರಿಯ ವಿಮರ್ಶಕ ಜಿ. ಎಚ್. ನಾಯಕ ಅವರ ಕುರಿತ ಈ ಕೃತಿ ಮುಖ್ಯವಾಗುತ್ತದೆ.
©2024 Book Brahma Private Limited.