ಬೆಂಗಳೂರು ನಗರ ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿಗಾಗಿ ಪ್ರಕಟಿಸಿದ ಕೃತಿ”ನುಡಿ ಜಾಗರ’. ಮಾಯಣ್ಣ ಪ್ರಧಾನ ಸಂಪಾದಕರು ಹಾಗೂ ಕೆ.ಎಲ್. ರಾಜಶೇಖರ ಸಂಪಾದಕರು. ಬೆಂಗಳೂರು ಸಾಹಿತ್ಯ, ಇತಿಹಾಸ ಕುರಿತಂತೆ ’ಗತ ಕಥನ’, ಕನ್ನಡ ಸಾಹಿತ್ಯ ಪರಿಷತ್ತು, ಪ್ರಮುಖ ಕವಿ-ಸಾಹಿತಿ-ಚಿಂತಕರ ಕೊಡುಗೆ ಕುರಿತು ’ಸಾಹಿತ್ಯ ಸಂವಾದ’, ವಿವಿಧ ವಲಯಗಳಲ್ಲಿ ಮಹಿಳೆಯ ಸಬಲೀಕರಣ ಕುರಿತಂತೆ ’ಸ್ತ್ರೀ ಸಂವೇದನೆ’ ಹಾಗೂ ವೈದ್ಯಕೀಯ-ಆರೋಗ್ಯ-ಸಮಾಜ-ಸಿನಿಮಾ-ಸಂಪರ್ಕ-ತಂತ್ರಜ್ಞಾನ ಹೀಗೆ ನಾನಾ ವಲಯಗಳಲ್ಲಿಯ ಸಾಧನೆ ಕುರಿತಂತೆ ’ವಿಜ್ಞಾನವೆಂಬ ಜ್ಞಾನ’ ಹೀಗೆ ಪ್ರಮುಖ ನಾಲ್ಕು ವಿಭಾಗಗಳಡಿ ಪರಿಣಿತರ ಲೇಖನಗಳು ನೆನಪಿನ ಸಂಪುಟವಾದ ’ನುಡಿ ಜಾಗರ’ದಲ್ಲಿದ್ದು, ವಿಷಯ ವೈವಿಧ್ಯತೆಯಿಂದ ಕೂಡಿದೆ.
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಮನು ಬಳಿಗಾರ ಕೃತಿಯ ಬೆನ್ನುಡಿಯಲ್ಲಿ ಅಭಿಪ್ರಾಯಪಟ್ಟಂತೆ; ನುಡಿ ಜಾಗರ ಸ್ಮರಣ ಸಂಚಿಕೆ ತನ್ನ ಗುಣ ಮತ್ತು ಗಾತ್ರ ಎರಡರಿಂದಲೂ ಸಾಹಿತ್ಯ ಸಂಪುಟವಾಗಿ ಮಾತ್ರವಲ್ಲ; ಒಂದು ಆಕರ ಗ್ರಂಥವಾಗಿಯೂ ರೂಪುಗೊಂಡಿದೆ. ಇಲ್ಲಿರುವ 50ಕ್ಕೂ ಹೆಚ್ಚು ಲೇಖನಗಳು ಕನ್ನಡ-ಕನ್ನಡಿಗ -ಕರ್ನಾಟಕ ಕುರಿತ ಚಿಂತನೆಯನ್ನು ಹಲವು ಆಯಾಮಗಳಲ್ಲಿ ವಿಸ್ತರಿಸಲು ಪ್ರಯತ್ನಿಸಲಾಗಿದೆ. ಈ ಲೇಖನಗಳು ಇತಿಹಾಸವನ್ನು ಬಗೆಯುವಂತೆಯೇ ವತಮಾನದ ವಿದ್ಯಮಾನಗಳ ಕುರಿತು ವೈವಿಧ್ಯಮಯ ಚಿಂತನೆಗೆ ದಾರಿ ಮಾಡಿಕೊಡುತ್ತವೆ’ ಎಂದಿದ್ದಾರೆ.
©2024 Book Brahma Private Limited.