ನೆನಪೇ ನಂದಾದೀಪ

Author : ಕಲ್ಯಾಣರಾವ ಜಿ. ಪಾಟೀಲ

Pages 552

₹ 600.00




Year of Publication: 2021
Published by: ಪವಿತ್ರ ಪ್ರಕಾಶನ
Address: # ಸರಸ್ವತಿಪುರ, ಕಲಬುರಗಿ

Synopsys

‘ನೆನಪೇ ನಂದಾದೀಪ’-ಡಾ. ಈಶ್ವರಯ್ಯ ಮಠ ಅವರ ಸಂಸ್ಮರಣ ಸಂಪುಟ. ಪ್ರಧಾನ ಸಂಪಾದಕರು. ಡಾ. ಕಲ್ಯಾಣರಾವ ಜಿ. ಪಾಟೀಲ ಹಾಗೂ ಡಾ. ಜಗನ್ನಾಥ ಹೆಬ್ಬಾಳೆ, ಸಂಪಾದಕರು: ಪ್ರೊ. ಶಿವಾನಂದ ಎಸ್. ವಿರಕ್ತಮಠ ಹಾಗೂ ಪ್ರೊ. ಲಿಂಗಣ್ಣ ಗೋನಾಲ. ಈ ಸಂಪುಟದಲ್ಲಿ ಜೀವನ ಸಾಧನೆ, ಸಾಹಿತ್ಯಕ ಸಾಧನೆ, ಕಾವ್ಯ ನಮನ ಮತ್ತು ಕಾವ್ಯ ಚಿಂತನ ಎಂಬ ನಾಲ್ಕು ಭಾಗಗಳಿವೆ. ಮೊದಲನೆಯ ಭಾಗದಲ್ಲಿ ಈಶ್ವರಯ್ಯಮಠ ಅವರ ಜೀವನ ಕುರಿತು ಅವರ ಗುರುಗಳು, ಸಹೋದ್ಯೋಗಿಗಳು, ಆತ್ಮೀಯರು, ಧರ್ಮಪತ್ನಿ, ಮಕ್ಕಳು, ಬಂಧು-ಮಿತ್ರರು ಮತ್ತು ಅವರ ವಿದ್ಯಾರ್ಥಿಮಿತ್ರರು ಬರೆದಿರುವ 61 ಲೇಖನಗಳಿವೆ. 2ನೇ ಭಾಗದಲ್ಲಿ ಡಾ. ಈಶ್ವರ್ಯಯ ಮಠ ಅವರ ಸ್ವತಂತ್ರ ಕೃತಿಗಳು, ಪಠ್ಯಪುಸ್ತಕಗಳಿಗಾಗಿ ಸಂಗ್ರಹಿಸಿ ಸಿದ್ಧಪಡಿಸಿದ ಪಠ್ಯಕೃತಿಗಳು, ಸಂಪಾದಿತ ಗ್ರಂಥಗಳು ಕುರಿತು ನಾಡಿನ ಹಿರಿಯ ಲೇಖಕರು ಬರೆದಿರುವ 35 ಸಮೀಕ್ಷಾ ಬರಹಗಳಿವೆ.

ಡಾ. ಈಶ್ವರಯ್ಯ ಮಠ ಅವರ ಸಂಶೋಧನ ಮಹಾಪ್ರಬಂಧ ‘ಹಾರಿತೋ ಹಂಸ ಹಾರಿತು’. ಡಾ. ಶಿವಾನಂದ ಎಸ್. ವಿರಕ್ತಮಠ, ಡಾ. ಶಾಂತಲಿಂಗ ಎಚ್. ಘಂಟೆ, ಡಾ. ಶಿವಗಂಗಾ ರುಮ್ಮಾ ಅವರು ಸ್ವರವಚನ ಸಾಹಿತ್ಯದ ಅಧ್ಯಯನ ಕುರಿತು ಸಮೀಕ್ಷಿಸಿದ್ದಾರೆ. ಚಿಂತಕರಾದ ಬಿ. ಮಹಾದೇವಪ್ಪ, ಆದರ್ಶ ಐ.ಪಿ.ಎಸ್. ಅಧಿಕಾರಿ ಶ್ರೀ ಗಿರೆಪ್ಪ ಪಾಟೀಲರ ಜೀವನ ಚರಿತ್ರೆ ಬರೆದಿರುವರು. ಶ್ರೀ ಮಹಾದೇವಪ್ಪ ರಾಂಪೂರೆ, ಡಾ. ಎಂ.ಜಿ. ಬಿರಾದಾರ, ಶ್ರೀ ಕೆ. ವಿಶ್ವನಾಥ, ರೊಟ್ನಡಗಿ ತಾತಾ, ಡಾ. ವಿ.ಜಿ. ಪೂಜಾರ, ಪ್ರೊ. ಸಿ.ಆರ್. ಬಡಾ, ಶ್ರೀ ಎಂ.ಆರ್. ಬುದ್ಧಿವಂತಶೆಟ್ಟಿ, ಶ್ರೀ ಬಿ.ಎಂ. ಸಿದ್ಧವೀರಯ್ಯ, ಡಾ. ಬಿ.ವಿ. ಪಟೇಲ, ಶ್ರೀ ಎಂ..ಪಿ. ಪ್ರಕಾಶ, ಡಾ. ವಿಜಯಶ್ರೀ ಸಬರದ, ಡಾ. ಬಸವರಾಜ ಸಬರದ ಮೊದಲಾದ ಹಿರಿಯ ಚೇತನ, ಸಾಹಿತಿ ಚಿಂತಕರಲ್ಲಿ ಅಡಗಿದ್ದ ಸದ್ಗುಣಗಳನ್ನು ಅವರವರ ಆದರ್ಶ ವ್ಯಕ್ತಿತ್ವವನ್ನು, ಅವರ ಸಾಧನೆಯ ಸಿದ್ಧಿಯ ವಿವರಗಳನ್ನು, ಸಮಾಜ, ಧರ್ಮ-ಸಂಸ್ಕೃತಿ ಚಿಂತನೆಗಾಗಿ ಸಲ್ಲಿಸಿದ ಕಾಣ್ಕೆಗಳನ್ನು ‘ಬೆಳಿಗ್ಗೆಯ ಬೆಳಗು’ ದರ್ಶಿಸುತ್ತದೆ.

ವಿವಿಧ ಸಂದರ್ಭ, ಸನ್ನಿವೇಶ ಹಾಗೂ ಹಲವು ವೇದಿಕೆಗಳ ಮುಖಾಂತರ ಡಾ. ಈಶ್ವರಯ್ಯ ಮಠ ಮಾಡಿರುವ ಭಾಷಣಗಳಿ ಸಾಹಿತ್ಯಗಟ್ಟು, ವಿಚಾರಗಟ್ಟು ಹಾಗೂ ವ್ಯಕ್ತಿ ನುಡಿಗಟ್ಟು ಎಂಬ ಮೂರು ವಿಭಾಗಗಳಲ್ಲಿ ಏಳು ಲೇಖನಗಳಿರುವ ಕೃತಿಯೇ ನುಡಿಕಟ್ಟು. ಇದಲ್ಲದೇ ಬಿಚ್ಚುನುಡಿಗಳಂತಹ ಹಲವು ಕೃತಿಗಳನ್ನು ರಚಿಸಿದ್ದಾರೆ. ಇವುಗಳ ಜೊತೆಗೆ ಆಯ್ದ ಸ್ವರವಚನಗಳು, ಆಯ್ದ ವೈಚಾರಿಕ ಲೇಖನ ಸಂಗ್ರಹ, ಯಶೋಧರ ಚರಿತೆ ಸಂಗ್ರಹ, ವಚನ ಸಂಗ್ರಹಗಳನ್ನು ಸಂಪಾದಿಸಿದ್ದು, ಅವುಗಳೆಲ್ಲ ಸ್ನಾತಕ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳಾಗಿವೆ. ಇವು ಹೊರತಾಗಿಯೂ 20ಕ್ಕೂ ಹೆಚ್ಚು ಕೃತಿಗಳನ್ನು ಸಂಪಾದಿಸಿದ ಶ್ರೇಯಸ್ಸು ಶ್ರೀಯುತರಿಗೆ ಸಲ್ಲುತ್ತದೆ.

About the Author

ಕಲ್ಯಾಣರಾವ ಜಿ. ಪಾಟೀಲ

ಲೇಖಕ ಡಾ. ಕಲ್ಯಾಣರಾವ ಜಿ. ಪಾಟೀಲ ಅವರು ಮೂಲತಃ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಸೊಂತ ಸಮೀಪದ ಸರಪೋಷ್ ಕಿಣಗಿ ಗ್ರಾಮದವರು. ತಂದೆ- ಗುರುಪಾದಪ್ಪ ಮಾಲಿಪಾಟೀಲ, ತಾಯಿ- ಮಹಾದೇವಿಯಮ್ಮ. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ  ಹಾಗೂ ಹಿರಿಯ ಮಾಧ್ಯಮಿಕ ಶಿಕ್ಷಣವನ್ನು ಪಕ್ಕದೂರಾದ ಚೇಂಗಟಾದಲ್ಲಿ ಪೂರ್ಣಗೊಳಿಸಿದರು. ಪ್ರೌಢಶಾಲೆಯಿಂದ ಪದವಿಯವರೆಗೂ ಕಲಬುರಗಿಯ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ ನಂತರ  ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಿಂದ ಕಾಲೇಜಿಗೆ ಪ್ರಥಮ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಹತ್ತನೇ ರ್‍ಯಾಂಕಿನೊಂದಿಗೆ ಬಿ.ಎ. ಪದವಿ ಪಡೆದರು. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎರಡನೆಯ ರ್‍ಯಾಂಕಿನೊಂದಿಗೆ ಎಂ.ಎ ಪದವಿ ಹಾಗೂ ಮೂರನೇ ರ್‍ಯಾಂಕಿನೊಂದಿಗೆ ಎಂ.ಫಿಲ್ ಪದವಿ  ಹಾಗೂ ಡಾ. ಎಂ.ಎಂ. ...

READ MORE

Related Books