ಸಾಹಿತಿ ನಾ.ಗೀತಾಚಾರ್ಯ ಅವರ ‘ನವ್ಯ ಸ್ಪೂರ್ತಿ’ ಕೃತಿಯು ಡಾ.ವಿನಾಯಕ ಕೃಷ್ಣ ಗೋಕಾಕರ ಹಾಗೂ ಅವರ ಜೀವನದ ಬಗ್ಗೆ ಬರೆದಿರುವ ಬರಹಗಳ ಸಂಗ್ರಹವಾಗಿದೆ. ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ, ಅಧ್ಯಕ್ಷ ಎನ್. ಬಸವಾರಾಧ್ಯ ಅವರು ಈ ಕೃತಿಗೆ ಮುನ್ನುಡಿ ಬರೆದಿದ್ದು,‘ 22-4-1992ರಂದು ನಮ್ಮನ್ನಗಲಿದ ಜ್ಞಾನಪೀಠ ಪ್ರಶಸ್ತಿ ವಿಜೇತ, ದಾರ್ಶನಿಕ, ಕವಿ, ಶ್ರೇಷ್ಠ ಚಿಂತಕ ಡಾ|| ವಿನಾಯಕ ಕೃಷ್ಣ ಗೋಕಾಕ್ ಅವರ ಬಗೆಗೆ ಪ್ರತಿ ತಿಂಗಳೂ ವರ್ಷ ಪೂರ್ತಿ ಪ್ರತಿಷ್ಠಾನ ನಡೆಸಿದ ಗೋಕಾಕ್ ತಿಂಗಳ ನೆನಪ ಉಪನ್ಯಾಸಗಳ ಸಂಕಲನ ಈ ಗ್ರಂಥ ಇದರಲ್ಲಿ ಗೋಕಾಕ್ ಅವರನ್ನು ಮತ್ತು ಅವರ ಸಾಹಿತ್ಯ ಕೃತಿಗಳನ್ನು ಕುರಿತಂತೆ ಮೌಲಿಕ ವಿಚಾರಗಳುಳ್ಳ ಹಲವು ಲೇಖನಗಳಿದ್ದು ಗೋಕಾಕ್ ಅವರ ಜೀವನ ಸಾಧನೆಯ ಬಗ್ಗೆ ಒಂದು ಸಮಗ್ರ ಚಿತ್ರಣವನ್ನು ಕೊಡಲಾಗಿದೆ’ ಎಂದಿದ್ದಾರೆ. ಪ್ರೊ | ಚಿ. ನ. ಮಂಗಳ ಅವರು ಈ ಕೃತಿಗೆ ಬೆನ್ನುಡಿ ಬರೆದಿದ್ದಾರೆ.,‘ನವೋದಯ ಸಾಹಿತ್ಯ ಒಂದು ಸಿದ್ಧಿಸ್ತರಕ್ಕೆ ಬಂದು ನಿಂತಾಗ, ಸಾಹಿತ್ಯ ದಲ್ಲಿ ಪ್ರಗತಿಯನ್ನು ಆಶಿಸಿ, ಕನ್ನಡ ಸಾಹಿತ್ಯ 'ನವ್ಯತೆ'ಯ ಪಥದಲ್ಲಿ ಸಾಗಬೇಕು ಎಂದು ಸ್ಪಷ್ಟವಾಗಿ ಹೇಳಿದವರು ಗೋಕಾಕರು ನವ್ಯತೆಯನ್ನೂ ನವ್ಯಕಾವ್ಯವನ್ನೂ ಕುರುತು ಇಪ್ಪತ್ತೆರಡು ವರ್ಷಗಳಿಗೂ ಮೇಲ್ಪಟ್ಟು ಅವರು ಬರೆದ ಲೇಖನಗಳ ಸಂಗ್ರಹವೇ ನವ್ಯತೆ, ಸಾಹಿತ್ಯ ಹಾಗೂ ನವ್ಯತೆ, ನವ್ಯಕಾವ್ಯದ ರೀತಿ, ಕಾವ್ಯ ಹಾಗೂ ನವ್ಯಕಾವ್ಯ, ನವ್ಯಕಾವ್ಯ ಹಾಗೂ ಯುಗದ ಆವರಣ, ನವ್ಯತೆ ಹಾಗೂ ಭಾಷೆ, ನವ್ಯತೆ, ಛಂದಸ್ಸು, ಶೈಲಿ, ಭಾರತೀಯ ಪುನರುಜೀವನ ಹಾಗೂ ನವ್ಯತೆ ಮುಂತಾದ ಲೇಖನಗಳಿಂದ ಗೋಕಾಕರ ನವ್ಯತೆ' ಯ ಸಿದ್ಧಾಂತ ಸುಟ್ಛಗೊಳ್ಳುತ್ತದೆ. ಹಳತು ಮರೆಯಾಗಿ ಹೊಸತು ಹೇಗೆ ಮೂಡುತ್ತದೆ. ಅದಕ್ಕೆ ಕವಿ ಹೇಳು. ತಾರೆ. “ನಮ್ಮ ಸ್ವಭಾವದಲ್ಲಿಯೇ ಒಂದು ಹೆಚ್ಚಿನ ಕ್ರಾಂತಿಯಾದ ಹೊರತು ದೃಷ್ಟಿ ಯಲ್ಲಿ ಮಾರ್ಪಾಟಾಗಲಾರದು." ಕವಿ, ವಿಮರ್ಶಕ ಓದಗ, ಇಡೀ ಸಮಜ-ಹೀಗೆ ಬದುಕಿನ ನೋಟದಲ್ಲೇ ಒಂದು ಸಮಗ್ರ ಮಾರ್ಪಾಟಾಗಬೇಕು, ಕ್ರಾಂತಿಯಾಗಬೇಕು. ಈ "ಕ್ರಾ೦ತಿ" ದರ್ಶನದಲ್ಲಿ ಗೋಕಾಕರ ವಿಮರ್ಶೆಯ ನವ್ಯತೆಯ ಉಗಮ, 'ಕ್ರಾಂತಿ'ಯೆಂದರೆ ಕಾಯ್ತಲ್ಲ. ಇದು ವ್ಯಕ್ತಿಯಲ್ಲಿ ಮೂಡಿಬರಬೇಕಾದ ಹೊಸಪ್ರಜ್ಞೆ-ನವಮಾನವತಾ ದೃಷ್ಟಿ’ ಎಂಇದ್ದಾರೆ. ಅಲ್ಲದೆ, "ಕನ್ನಡ ಕಾವ್ಯದಲ್ಲಿ ಆಧುನಿಕ ಯುಗವು ಮುಗಿಯುವ ಸಮಯ ಬಂದಿದೆ. ನವಯುಗ ಪ್ರಾರಂಭವಾಗಲಿದೆ. ನಮ್ಮ ಪರಂಪರೆಯು ಒಂದು ಸಿದ್ಧಿಯನ್ನು ಮುಟ್ಟಿ, ಬೇರೆ ಬೇರೆ ಮಾರ್ಗದ ಬೋಧನೆಯ ಆವಶ್ಯಕತೆಯಿದೆ" ಎಂದು ಮುಂದೆ ಬರಲಿರುವ ಯುಗದ ಸೂಚನೆ ಕೊಟ್ಟವರು ಅವರು. ಆಂಗ್ಲ ನವ್ಯಕಾವ್ಯದ ಪಿತಾಮಹನೆನಿಸಿದ ಜೆ.ಎಮ್.ಹಾಪ್ಕಿನ್ಸ್ ಕಾವ್ಯದಿಂದ ಹಿಡಿದು ಟಿ.ಎಸ್. ಇಲಿಯಟ್ ಆಡನ್, ಮೆಕ್ನೀಸ್, ಸಿ.ಡೇ.ಲುಯಿಸ್, ಮೊದ ಲಾದ ಕವಿಗಳ ಕಾವ್ಯವನ್ನು ಅವಲೋಕಿಸಿ, ಹೊಸತಿನ ಧ್ವನಿಯನ್ನು ಗುರುತಿಸಿ, ಕನ್ನಡಿಗರಿಗೆ 'ನವ್ಯತೆ'ಯ ಪರಿಕಲ್ಪನೆಯನ್ನು ಮೊತ್ತಮೊದಲಿಗೆ ತಂದುಕೊಟ್ಟವರು ಗೋಕಾಕರು ಎಂದಿದ್ದಾರೆ.
©2024 Book Brahma Private Limited.