ನಾನು ಕಲಬುರ್ಗಿ

Author : ರಾಜೇಂದ್ರ ಚೆನ್ನಿ

Pages 192

₹ 120.00




Year of Publication: 2016
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ ಹೋಟೆಲ್, ಗದಗ- 582101
Phone: 9480286844

Synopsys

ಕಲಬುರ್ಗಿ ಅವರ ಬರಹದ ಶೈಲಿ, ಅವರ ಚಿಂತನಾ ಕ್ರಮ, ಬಹುಶ್ರುತ ವಿದ್ವತ್ತನ್ನು ಪರಿಚಯಿಸುವ ಉದ್ದೇಶದಿಂದ ರೂಪಿಸಲಾದ ವಾಚಿಕೆ ಇದು. ಮುಖ್ಯವಾಗಿ ಯುವ ಬರಹಗಾರರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಗ್ರಂಥವನ್ನು ಸಿದ್ಧಪಡಿಸಲಾಗಿದೆ. ಕಲಬುರ್ಗಿ ಅವರ ಮಾರ್ಗ ಸಂಪುಟದ ಹದಿನೈದು ಲೇಖನಗಳನ್ನು ಆಯ್ದು ಕೃತಿಯನ್ನು ಸಿದ್ಧಪಡಿಸಲಾಗಿದೆ. ಈ ಲೇಖನಗಳಿಗೆ ಪೂರಕವಾದ ಉಲ್ಲೇಖಗಳು ಹಾಗೂ ಕಲಬುರ್ಗಿ ಅವರನ್ನು ಪ್ರಭಾವಿಸಿದ ವ್ಯಕ್ತಿ ಮತ್ತು ಘಟನೆಗಳನ್ನು ಪ್ರತ್ಯೇಕವಾಗಿ ನೀಡಲಾಗಿದೆ. ಸಾಂಸ್ಕೃತಿಕ ವಲಯದ ಗಣ್ಯರಾದ ಡಾ.ರಾಜೇಂದ್ರ ಚನ್ನಿ, ಡಾ. ರಹಮತ್ ತರೀಕೆರೆ ಹಾಗೂ ಡಾ. ಮೀನಾಕ್ಷಿ ಬಾಳಿ ಕೃತಿಯನ್ನು ಸಂಪಾದಿಸಿದ್ದಾರೆ.

 ಎಂ. ಎಂ. ಕಲಬುರ್ಗಿ ಅವರ ಆಯ್ದ ಚಿಂತನೆಗಳ ಸಂಗ್ರಹ.  ’ಭಾರತದಂಥ ಭಾವನಿಷ್ಠ ರಾಷ್ಟ್ರದಲ್ಲಿ ಸಂಶೋಧನೆ ಸರಳದಾರಿಯಲ್ಲ' ಎನ್ನುವ ಸ್ಪಷ್ಟತೆಯಿದ್ದ ಕಲಬುರ್ಗಿ ತನ್ನ ಸಂಶೋಧನೆಯ ವಿರುದ್ದ ಪ್ರತಿರೋಧಗಳನ್ನು ನಿರೀಕ್ಷಿಸಿದ್ದರು.  ಅವರ ನೆನೆಯುವುದು ಎಂದರೆ ಕಲಬುರ್ಗಿಯವರ ಬರಹಗಳ ಓದುವುದು. ಆಯ್ದ ಬರಹಗಳ ಈ ಕೃತಿ ಕಲಬುರ್ಗಿಗೆ ಸಲ್ಲಿಸಿದ ಅರ್ಥಪೂರ್ಣ ಶೃದ್ದಾಂಜಲಿ.  ಕೊನೆಯಲ್ಲಿ ಕಲಬುರ್ಗಿಯವರ ಉಲ್ಲೇಖನೀಯ ಹೇಳಿಕೆಗಳು ಮತ್ತು ಚಿಂತನೆಯ ಸಾಲುಗಳನ್ನು ನೀಡಲಾಗಿದೆ.  ವಚನಗಳ ಭಾಷೆ ಕುರಿತ ಚರ್ಚೆಯಲ್ಲಿ ’ಭಾಷೆಯು ಸಾಹಿತ್ಯದ ಮೂಲಕ ಯಾವುದನ್ನೇ ಅಭಿವ್ಯಕ್ತಿಸುವುದನ್ನಲ್ಲ, ಸ್ಥಾಪಿಸುವುದನ್ನು ಮಾಡುತ್ತದೆ' ಎಂಬ ನಿಲುವು ಅವರದು. ಕನ್ನಡ ಮಾತೃಭಾಷಾ ಪ್ರಜ್ಞೆಯ ಇತಿಹಾಸ ಅವಲೋಕಿಸುವ ಅವರು  ಅದರ ಮಿತಿ ವ್ಯಾಪ್ತಿಗಳನ್ನೂ ಚರ್ಚಿಸುತ್ತಾರೆ. ವಚನಗಳು ಕೇಂದ್ರದಲ್ಲಿ ಇಟ್ಟು ಭಾಷೆ ಸಾಹಿತ್ಯ, ಸಂಸ್ಕೃತಿಯ ಚರ್ಚಿಸುವುದಕ್ಕೆ ಆದ್ಯತೆ ನೀಡುತ್ತದೆ.  ಕಲಬುರ್ಗಿ ಅವರ ಚಿಂತನೆಯ ಸ್ಥೂಲ ಪರಿಚಯ ಮಾಡಿಕೊಡುತ್ತದೆ. 

About the Author

ರಾಜೇಂದ್ರ ಚೆನ್ನಿ
(21 October 1955)

ರಾಜೇಂದ್ರ ಚೆನ್ನಿ ಅವರು ಕುವೆಂಪು ವಿ.ವಿ. ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ನಿವೃತ್ತ ಪ್ರಾಧ್ಯಾಪಕರು. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಾಗರಗಾಳಿ ಗ್ರಾಮದವರು. 1955ರ ಅಕ್ಟೋಬರ್ 21ರಂದು ಜನನ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ, ಮೈಸೂರು ವಿ.ವಿ.ಯಿಂದ ಪಿಎಚ್.ಡಿ ಪಡೆದರು. ಸಂಡೂರು, ಬೆಳಗಾವಿ ಸೇರಿದಂತೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಹೀಗೆ ವಿವಿಧೆಡೆ ಬೋಧನೆಯ ಸೇವೆ ಸಲ್ಲಿಸಿ, 1981ರಿಂದ 1991ರವರೆಗೆ ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನಲ್ಲಿ ಅಧ್ಯಾಪಕರಾಗಿ, ನಂತರ, ಕುವೆಂಪು ವಿ.ವಿ. ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದರು. ಕನ್ನಡ-ಇಂಗ್ಲಿಷ್ ಎರಡೂ ಭಾಷೆಯಲ್ಲಿ ವಿಮರ್ಶೆ, ಲೇಖನ ಹಾಗೂ ಕತೆಗಳನ್ನು ಬರೆಯುತ್ತಲೇ ಜನಪರ ಚಳವಳಿಗಳಲ್ಲಿ ಭಾಗವಹಿಸಿದ್ದಾರೆ. 2009ನೇ ಸಾಲಿನ ಪ್ರತಿಷ್ಠಿತ ಜಿ.ಎಸ್.ಎಸ್. ಪ್ರಶಸ್ತಿ ಪಡೆದಿದ್ದಾರೆ. ಇವರ ಮೊದಲ ...

READ MORE

Related Books