`ನಮ್ಮ ಚೆನ್ನಣ್ಣ' ಹಿರಿಯ ಲೇಖಕ ಡಾ. ಚೆನ್ನಣ್ಣ ವಾಲೀಕಾರ ಅವರಿಗೆ ಸಲ್ಲಿಸಿದ ಸಂಸ್ಮರಣ ಗ್ರಂಥವಾಗಿದೆ. ಡಾ.ಗವಿಸಿದ್ದಪ್ಪ ಎಚ್. ಪಾಟೀಲ ಈ ಕೃತಿಯನ್ನು ಸಂಪಾದಿಸಿದ್ದಾರೆ. ಡಾ.ಚೆನ್ನಣ್ಣ ವಾಲೀಕಾರ ಎಂಬ ವ್ಯಕ್ತಿ ಕೇವಲ ವ್ಯಕ್ತಿಯಾಗದೇ ಒಂದು ಶಕ್ತಿಯಾಗಿದ್ದರು. ಯಾವಾಗಲೂ ಕೆಂಪು ಅಂಗಿ ಧರಿಸಿ ಕ್ರಾಂತಿ ಮಾಡಿದ ಸರಳ ವ್ಯಕ್ತಿ ಅವರಲ್ಲಿ ಅಪಾರವಾದ ಜ್ಞಾನವಿತ್ತು. ತನ್ನ ದೇಸಿ ಸೊಗಡನ್ನು ಬಿಡದೇ ಕಾಪಿಟ್ಟುಕೊಂಡು ಬಂದವರು. ಕನ್ನಡ ಸಾಹಿತ್ಯಕ್ಕೆ ಜಾನಪದ, ನಾಟಕ, ಪ್ರವಾಸ ಕಥನ, ಆಧುನಿಕ ವಚನ, ಕಾವ್ಯ, ಕಾದಂಬರಿ, ಕತೆ, ಸಂಶೋಧನೆ, ಹಾಗೂ ಮಹಾಕಾವ್ಯಗಳನ್ನು ನೀಡಿದ ಮಹಾಕವಿ. ಅನೇಕ ಪ್ರಶಸ್ತಿ ಗೌರವಗಳು ಅವರಿಗೆ ಲಭಿಸಿವೆ. ಆದರೆ ಸಿಗಬೇಕಾದ ಗೌರವಗಳು ದೊರಕಲಿಲ್ಲವೆಂಬ ಹಪಾಹಪಿ ಅವರಿಗಿರಲಿಲ್ಲ. ಬದಲಾಗಿ, ಎಲ್ಲರ ಮನದ ಭಾವನೆಗೆ ನಕ್ಕು ಸುಮ್ಮನಾಗುತ್ತಿದ್ದ ಪ್ರೀತಿಯ ಚೆನ್ನಣ್ಣನವರ ಕುರಿತು ಹಲವರು ತಮ್ಮ ನೆನಪುಗಳನ್ನು, ಕಾವ್ಯಗಳನ್ನು, ಲೇಖನಗಳನ್ನು ಬರೆದು ಚೆನ್ನಣ್ಣನನ್ನು ಅಪ್ಪಿಕೊಂಡಿದ್ದಾರೆ. ಇಂತಹ ಕೃತಿಯನ್ನು ಲೇಖಕ ಸಾಹಿತಿ ಡಾ.ಗವಿಸಿದ್ದಪ್ಪ ಎಚ್.ಪಾಟೀಲರು ಕೆಲವೇ ದಿನಗಳಲ್ಲಿ ಸಂಪಾದಿಸಿದ್ದು, ಅವರ ಶ್ರಮ ಎದ್ದು ಕಾಣುತ್ತದೆ.
©2024 Book Brahma Private Limited.