‘ಕಥಾತಪಸ್ವಿ’ ಕೃತಿಯು ಜಗದೀಶ ಬ. ಹಾದಿಮನಿ, ಎಂ.ಡಿ ಚಿತ್ತರಗಿ, ರವಿ ಬ. ಹಾದಿಮನಿ ಅವರ ಅಬ್ಬಾಸ್ ಮೇಲಿನಮನಿಯವರ ಸಂಸ್ಮರಣ ಗ್ರಂಥವಾಗಿದೆ. ಈ ಕೃತಿಗೆ ಬೆನ್ನುಡಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ: ಅಬ್ಬಾಸ ಮೇಲಿನಮನಿಯವರ ಸಾಹಿತ್ಯ ಕುರಿತ ಹಾಗೆ ಮರು ಓದು ಪ್ರಾರಂಭವಾಗಬೇಕು. ರಾಜಧಾನಿಯಿಂದ ದೂರವಿರುವ, ಸಾಹಿತ್ಯ ರಾಜಕಾರಣ ಅಬ್ಬಾಸರನ್ನು ಉಪೇಕ್ಷೆಗೆ ಒಳಪಡಿಸಿತು ಎನ್ನುವ ವಿಷಾದವಿದೆ. ಹೀಗಾಗಿ ನಮ್ಮಲ್ಲಿಯೇ ವಿಮರ್ಶಕರು ಹುಟ್ಟಬೇಕು. ಗಟ್ಟಿಯಾಗಿ ಬರೆಯುತ್ತಲೇ ರಾಜಧಾನಿಯ ಸಾಹಿತ್ಯ ರಾಜಕಾರಣಕ್ಕೆ ಉತ್ತರಕೊಡುವ ಜವಾಬ್ಧಾರಿಯನ್ನು ಯುವ ಬರಹಗಾರರು ಹೊರಬೇಕಿದೆ. ಇವರನ್ನು ನೆನಪಿಸಿಕೊಳ್ಳುವ ಈ ಮಹತ್ತರ ಕಾರ್ಯದಲ್ಲಿ ನನ್ನೊಳಗಿನ ಅಬ್ಬಾಸಣ್ಣನನ್ನು ಮತ್ತೊಮ್ಮೆ ನನ್ನೊಳಗೆ ಜೀವಂತಗೊಳಿಸಿದ್ದಾರೆ ಎಂದಿದ್ದಾರೆ ಮಲ್ಲಿಕಾ ಘಂಟಿಯವರು. ಕೃತಿಯ ಕುರಿತು ರಂಜಾ ದರ್ಗ ಅವರು, ಸಂವೇದನಾಶೀಲ ಸಾಹಿತ್ಯದಲ್ಲಿ ಮಾನವ ಸಂವೇದನೆಗಳಿರುತ್ತವೆ. ಅಬ್ಬಾಸ್ ಅವರು ತಮ್ಮ ಪರಿಸರದಲ್ಲಿನ ಮುಸ್ಲಿಂ ಜೀವನ ವಿಧಾನದ ಮೂಲಕ ಮಾನವ ಸಂವೇದನೆಯನ್ನು ಎತ್ತಿ ಹಿಡಿದಿದ್ದಾರೆ. ಸೃಜನಶೀಲ ಸಾಹಿತಿಗಳು ಎತ್ತಿ ಹಿಡಿಯಬೇಕದುದು ಈ ರೀತಿಯ ಮಾನವ ಸಂವೇದನೆಯನ್ನೇ. ಇಂಥ ಸಾಧನೆಯನ್ನು ಮಾಡಿದ ಅಬ್ಬಾಸರು ತಮ್ಮ ಕಥೆಗಳ ಮೂಲಕ ಅಮರರಾಗಿದ್ದಾರೆ ಎಂದಿದ್ದಾರೆ.
©2024 Book Brahma Private Limited.