ಹೋರಾಟಗಾರ, ದುಡಿವ ಜನರ ಪ್ರತಿನಿಧಿಯಾಗಿ ಕೆಲಸ ಮಾಡಿರುವ ಎಂ. ಎಸ್. ಕೃಷ್ಣನ್ ಅವರ ಬದುಕಿನ ವಿವರಗಳ ಸಂಗ್ರಹವೇ 'ಜನಮುಖಿ'. ವಿದ್ಯಾರ್ಥಿ ಸಂಘಟನೆಯ ಮೂಲಕ ಸ್ವಾತಂತ್ರ ಹೋರಾಟಕ್ಕೆ ಧುಮುಕಿ, ಬಳಿಕ ತನ್ನ ಬದುಕನ್ನು ಕಮ್ಯುನಿಸ್ಟ್ ಚಳವಳಿಗೆ ಅರ್ಪಿಸಿದವರು ಕೃಷ್ಣನ್. ಅವರ ಬದುಕು, ಹೋರಾಟವನ್ನು ಅವರ ಆತ್ಮೀಯರು, ಸಂಗಾತಿಗಳು ಮತ್ತು ಇನ್ನಿತರ ಲೇಖಕರ ಮೂಲಕ ಕೃತಿಗಿಳಿಸಲಾಗಿದೆ. “ಯಾವುದೇ ವ್ಯಕ್ತಿಯ ಸ್ಮರಣೆಗೆ ಎರಡು ಆಯಾಮಗಳಿರುತ್ತವೆ. ಒಂದು, ಅವರ ಬದುಕಿನ ಸಂದರ್ಭದಲ್ಲಿ ಅವರು ಬದುಕಿದ ರೀತಿ, ನಡೆಸಿದ ಹೋರಾಟಗಳು, ನಿಸ್ವಾರ್ಥ ಜೀವನ, ತ್ಯಾಗ ಮೊದಲಾದವುಗಳನ್ನು ಗೌರವಿಸುವುದು. ಎರಡು, ಅವರ ಚಿಂತನೆ, ಬದುಕಿನ ವಿಧಾನ, ಆಶಯ, ಆದರ್ಶಗಳು ಇಂದಿಗೂ ಅವಶ್ಯವೆನ್ನುವಂತಿದ್ದರೆ ಅವುಗಳನ್ನು ಮಾದರಿಯಾಗಿಟ್ಟುಕೊಳ್ಳುವುದು. ಈ ಎರಡೂ ಆಯಾಮಗಳಿಗೆ ಅರ್ಹವಾದ ವ್ಯಕ್ತಿ ಕಾಮ್ರೇಡ್ ಎಂ. ಎಸ್. ಕೃಷ್ಣನ್” ಅನ್ನೋದು ಸಂಪಾದಕರ ಮಾತು.
©2024 Book Brahma Private Limited.