ಕನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬರಾದ ಜಿ.ಎಸ್. ಶಿವರುದ್ರಪ್ಪ ಅವರು ವಿಮರ್ಶಕ, ಸಂಶೋಧಕ, ನಾಟಕಕಾರ, ಉತ್ತಮ ಪ್ರಾಧ್ಯಾಪಕ ಹಾಗೂ ಆಡಳಿತಗಾರ. ಕುವೆಂಪು ಅವರ ಮೆಚ್ಚಿನ ಶಿಷ್ಯರಲ್ಲಿ ಒಬ್ಬರಾದ ಅವರು ಗೋವಿಂದ ಪೈ, ಕುವೆಂಪು ನಂತರ ಮೂರನೆಯ ರಾಷ್ಟ್ರಕವಿ. ’ಸೌಂದರ್ಯ ಸಮೀಕ್ಷೆ’ ಪ್ರೌಢ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ದೊರೆತಿದೆ. ಶಿವರುದ್ರಪ್ಪನವರ ಬದುಕು-ಬರಹಗಳನ್ನು ಎಚ್.ಎಸ್. ವೆಂಕಟೇಶ ಮೂರ್ತಿ ಅವರು ಈ ಕೃತಿಯಲ್ಲಿ ನೀಡಿದ್ದಾರೆ.
(ಹೊಸತು, ಫೆಬ್ರವರಿ 2013, ಪುಸ್ತಕದ ಪರಿಚಯ)
ನವಕರ್ನಾಟಕ ಪ್ರಕಾಶನ ಸುಮಾರು ಹನ್ನೆರಡು ವರ್ಷಗಳಿಂದ ತನ್ನ ಹೆಮ್ಮೆಯ ಯೋಜನೆಗಳಲ್ಲೊಂದಾದ 'ನವಕರ್ನಾಟಕ ಸಾಹಿತ್ಯ ಸಂಪದ' ಮಾಲೆಯಲ್ಲಿ ಈಗಾಗಲೆ: ಐವತ್ತೆರಡು ಕೃತಿಗಳನ್ನು ಹೊರತಂದಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕನ್ನಡ ಲೇಖಕರನ್ನು ಪರಿಚಯಿಸುವ ಅಮೋಘ ಸಾಧನೆಯಿದೆಂದು ಈಗಾಗಲೇ ಸಾಹಿತ್ಯ ವಲಯದಲ್ಲಿ ಪ್ರಶಂಸೆ ಪಡೆದಿದೆ. ಪ್ರಸ್ತುತ ಕೃತಿ ಈ ಪ್ರಶಸ್ತಿ ಪಡೆದಿರುವ ರಾಷ್ಟ್ರಕವಿ - ಶ್ರೇಷ್ಠಕವಿಯೆಂದು ನಾಡಿನಾದ್ಯಂತ ಗೌರವಿಸಲ್ಪಟ್ಟ ಡಾ|| ಜಿ. ಎಸ್. ಶಿವರುದ್ರಪ್ಪ ಅವರನ್ನು ಕುರಿತದ್ದಾಗಿದೆ. ಜಿ. ಎಸ್. ಎಸ್. ತಮ್ಮ ಸಾಧನೆಯನ್ನು ಗದ್ಯ-ಪದ್ಯ ಎರಡೂ ಪ್ರಕಾರಗಳಲ್ಲಿ ಸರಿದೂಗಿಸಿ ಸೈ ಎನಿಸಿಕೊಂಡವರು. ಕರ್ಣಾನಂದಕರವಾದ ಇವರ ಭಾವಗೀತೆಗಳನ್ನು ಕೇಳದ ಕನ್ನಡಿಗಲ್ಲ ಹಾಡದ ಗಾಯಕನಿಲ್ಲ ಎಂಬಷ್ಟು ಖ್ಯಾತಿ ಇವರದ್ದು ಇವರ ಭಾವಗೀತೆಗಳನ್ನು ಗಾಯಕರು, ಮಧುರ ಕಂಠದಿಂದ ಭಾವಪೂರ್ಣವಾಗಿ ಹಾಡುತ್ತಿದ್ದರೆ, ಸುತ್ತಲೂ ಹೊಸದಾದ ಭಾವಲೋಕವೊಂದು ಸೃಷ್ಟಿಯಾಗಿ ಶೋತೃ ಮೈಮರೆತು ಕೇಳುವುದು ಕಛೇರಿಗಳಲ್ಲಿ ಸಾಮಾನ್ಯ, ತಮ್ಮ 'ಕಾವ್ಯಾರ್ಥ ಚಿಂತನ' ಹ್ಯಾಗಿ ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಪಡೆದಿರುವ ಜಿ. ಎಸ್. ಎಸ್. ಅವರ ಬಾಲ್ಯ, ವಿದ್ಯಾಭ್ಯಾಸ ವೃತ್ತಿಜೀವನ, ಸಾಹಿತ್ಯಲೋಕದ ಪಡೆದಿರುವ ಪ್ರಶಸ್ತಿ-ಪುರಸ್ಕಾರ- ಗೌರವ - ಇವೆಲ್ಲವನ್ನೂ ಅವರ ಕೃತಿಗಳ ಪರಿಚಯದೊಂದಿಗೆ ಈ ಕೃತಿಯಲ್ಲಿ ನೀಡಲಾಗಿದೆ. ಜಿ. ಎಸ್. ಎಸ್. ಅವರನ್ನು ನಿಕಟವಾಗಿ ಬಲ್ಲ ಇನ್ನೋರ್ವ ಕವಿ ಡಾ|| ಎಚ್. ಎಸ್. ವೆಂಕಟೇಶಮೂರ್ತಿ ಇದನ್ನು ಬರೆದಿದ್ದಾರೆ.
©2024 Book Brahma Private Limited.