ಈಸಬೇಕು ಇದ್ದು ಜಯಿಸಬೇಕು : ಸಮಾಜಮುಖಿ ಕೀರ್ತನೆಗಳು

Author : ಎ.ವಿ. ನಾವಡ

Pages 108

₹ 60.00




Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಹರಿಪಾದಾರ್ಪಿತ ಮನಸ್ಸಿನ ದಾಸರು ರಚಿಸಿದ ಕೀರ್ತನೆಗಳಲ್ಲಿ ಸಮಾಜಮುಖಿಯಾದ ಕೀರ್ತನೆ ಗಳನ್ನು ಆಯ್ದು ಅದನ್ನು ಸೂಕ್ತ ಟಿಪ್ಪಣಿಗಳೊಡನೆ ಇಲ್ಲಿ ವಿವರಿಸಲಾಗಿದೆ. ಹರಿದಾಸರೆಲ್ಲ ಒಂದೇ ವರ್ಗ, ವರ್ಣ, ಜಾತಿ ಮತ್ತು ಪ್ರದೇಶದಿಂದ ಬಂದವರಲ್ಲ. ಅವರ ನೆಲೆ, ಹಿನ್ನೆಲೆ, ಸಾಧನೆಗಳು, ಚಿಂತನೆಗಳು ಸಾಕಷ್ಟು ವಿಫುಲತೆಯನ್ನು, ವಿವಿಧತೆಯನ್ನು ಧಾರಣ ಮಾಡಿಕೊಂಡಿವೆ. ಈ ಎಲ್ಲ ಕೀರ್ತನೆಗಳ ಮೂಲಸ್ಥಾಯಿ ಹರಿಭಕ್ತಿಯೇ ಆಗಿದ್ದರೂ ಆ ಭಕ್ತಿಯನ್ನು ಅವರು ಪ್ರತಿಪಾದಿಸುವ ರೀತಿಗಳು ಅವರವರ ಅನುಭವ, ಅಭ್ಯಾಸ ಮತ್ತು ಅನುಭಾವದ ಹಿನ್ನೆಲೆಯಲ್ಲಿ ಅನನ್ಯತೆಯ ಸತ್ವವನ್ನು ಗರ್ಭೀಕರಿಸಿಕೊಂಡಿವೆ. ಈ ಮಾನವ ಜೀವನ ಭಗವಂತನ ಯೋಜನೆಯಂತೆ ಕಲ್ಪನೆಯಂತೆ, ಸೂತ್ರದಂತೆ ನಡೆಯುವ ಪರನಿಯಂತ್ರಿತ ವ್ಯವಸ್ಥೆ ಎಂಬ ಆಶಯ ಇವುಗಳಲ್ಲಿ ಸೂಚಿತವಾಗಿದ್ದರೂ, ಈ ದೇಹ ಮತ್ತು ಬದುಕುಗಳು ನೀರ ಮೇಲಣ ಗುಳ್ಳೆಗಳು, ಅವುಗಳಿಗೆ ಸರ್ವತಂತ್ರ ಸ್ವಾತಂತ್ರ್ಯ ಇಲ್ಲ ಮತ್ತು ಅವು ಕ್ಷಣಿಕ ಎಂಬ ನಿವೃತ್ತಿಪರ ಸಂವೇದನೆಗಳು ಇಲ್ಲಿ ಹೂರಣಗೊಂಡಿದ್ದರೂ, ಅವುಗಳ ಹಿನ್ನೆಲೆಯಲ್ಲಿ ವ್ಯಕ್ತಾವ್ಯಕ್ತವಾಗಿ ಮನುಷ್ಯ ಬದುಕಿನ ಮಹತಿಯನ್ನು ಅವು ಪ್ರತಿಪಾದಿಸುತ್ತವೆ.

About the Author

ಎ.ವಿ. ನಾವಡ
(28 April 1946)

ಎ.ವಿ. ನಾವಡ ಅವರು 1946 ಏಪ್ರಿಲ್ 28ರಲ್ಲಿ ಮಂಗಳೂರು ಸಮೀಪದ ಕೋಟೆಕಾರು ಎಂಬಲ್ಲಿ ಜನಿಸಿದರು. ತಂದೆ ಕವಿ ಅಮ್ಮೆಂಬಳ ಶಂಕರನಾರಾಯಣ ನಾವಡ, ತಾಯಿ ಪಾರ್ವತಿ. ಮಂಗಳೂರಿನ ಸಂತ ಎಲೋಷಿಯಸ್ ಕಾಲೇಜಿನಲ್ಲಿ ಪದವಿಯನ್ನೂ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ. ಪದವಿಯನ್ನೂ ಪಡೆದರು. ಕುಂದಾಪುರದ ಭಂಡಾರ್‌ಕರ್ಸ್‌ ಕಾಲೇಜಿನಲ್ಲಿ 1970ರಿಂದ-94ರವರೆಗೆ ಉಪನ್ಯಾಸಕರಾಗಿ, ವಿಭಾಗ ಮುಖ್ಯಸ್ಥರಾಗಿ, ಪ್ರಾಧ್ಯಾಪಕರಾಗಿ 24 ವರ್ಷ ಸೇವೆ ಸಲ್ಲಿಸಿದರು. 1994ರಿಂದ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ, ಪ್ರಾಧ್ಯಾಪಕರಾಗಿ, ಪ್ರಸಾರಾಂಗದ ನಿರ್ದೇಶಕರಾಗಿ, ಪುರಂದರದಾಸ ಅಧ್ಯಯನ ಪೀಠದ ಅಧ್ಯಕ್ಷರಾಗಿ, ಉಡುಪಿಯ ಎಂ.ಜಿ.ಎಂ. ಕಾಲೇಜಿನ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದಲ್ಲಿ ಸಂಶೋಧಕರಾಗಿ, ಉಡುಪಿಯ ಗೋವಿಂದಪೈ ಸಂಶೋಧನ ಕೇಂದ್ರದ ...

READ MORE

Related Books