ಕಲಬುರ್ಗಿ ಅವರ ಹತ್ಯೆ ಬಳಿಕ ಅವರ ಸ್ಮರಣಾರ್ಥ ಗುಲ್ಬರ್ಗಾದ ಬಸವ ಸಮಿತಿಯ ಡಾ. ಬಿ.ಡಿ.ಜತ್ತಿ ವಚನಾಧ್ಯಯನ ಮತ್ತು ಸಂಶೋಧನ ಕೇಂದ್ರವು ವಿಚಾರ ಸಂಕಿರಣವೊಂದನ್ನು ಏರ್ಪಡಿಸಿತ್ತು. ಮುಖ್ಯವಾಗಿ ಅದು ಸಂಶೋಧನಾ ಸಾಹಿತ್ಯವನ್ನೇ ಕೇಂದ್ರೀಕರಿಸಿತ್ತು. ಈ ಸಂದರ್ಭದಲ್ಲಿ ಒಟ್ಟು ೧೮ ಪ್ರಬಂಧಗಳು ಮಂಡನೆಯಾದವು. ಅವುಗಳನ್ನೆಲ್ಲಾ ಸಂಪಾದಿಸಿ ’ಡಾ.ಎಂ.ಎಂ.ಕಲಬುರ್ಗಿ ಸಂಶೋಧನ ಸಾಹಿತ್ಯ’ ಕೃತಿ ಹೊರತಂದಿದ್ದಾರೆ ಡಾ. ವೀರಣ್ಣ ದಂಡೆ. ಕಲಬುರ್ಗಿ ಅವರ ಬದುಕು -ಸೇವೆ, ಅವರ ಶರಣ ಶಾಸ್ತ್ರಸಾಹಿತ್ಯ ಸಂಶೋಧನೆ, ಅವರ ಸಾಹಿತ್ಯ ಸಂಶೋಧನೆ, ಅವರ ಶರಣ ಅಧ್ಯಯನಗಳ ಕುರಿತು ಕೃತಿ ಪ್ರಸ್ತಾಪಿಸುತ್ತದೆ. ಅವರ ಸಂಶೋಧನೆ ಬಗೆಗೆ ಬಂದ ಕೃತಿಗಳಲ್ಲೇ ಅತ್ಯುತ್ತಮವಾದುದು ಎಂಬ ಹೆಗ್ಗಳಿಕೆಯೂ ಈ ಕೃತಿಗೆ ಸಂದಿದೆ.
©2024 Book Brahma Private Limited.