‘ಧೀಮಂತ’ ಕೃತಿಯು ಡಿ.ಎಸ್. ವೀರಯ್ಯ ಅವರ ಕ್ರಾಂತಿಕಾರಿ ಬಿ. ಬಸವಲಿಂಗಪ್ಪ ಸಂಸ್ಮರಣ ಸಂಪುಟವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಬಿ. ಬಸವಲಿಂಗಪ್ಪ ಅವರು, ಭಾರತ 1200 ವರ್ಷಗಳ ಹಿಂದೆ ಸಂಪೂರ್ಣ ಬೌದ್ಧ ರಾಷ್ಟ್ರವಾಗಿತ್ತು. ಆಗ ಬೇರೆ ಜಾತಿಗಳೇ ಇರಲಿಲ್ಲ. ಆದರೆ ವಿಚಿತ್ರ ಎಂದರೆ, ಮೌರ್‍ಯ ಹಾಗೂ ಗುಪ್ತ ದೊರೆಗಳನ್ನು ಇತಿಹಾಸದಲ್ಲಿ ಬೌದ್ಧ ಅರಸರು ಎಂದು ಗುರುತಿಸಲಾಗಿಲ್ಲ. ನಂತರ ಹಿಂದೂ ಧರ್ಮ ಪುನರುತ್ಥಾನವಾಯಿತು. ದಲಿತರಿಗೆ ಈ ಧರ್ಮದಲ್ಲಿ ಬಳಕೆಗೆ ಬಿಡಲಾಗಿದೆಯೇ? ಸಮಾನವಾಗಿ ಕಾಣುವ ಯತ್ನ ನಡೆದಿದೆಯೇ? ಶತಮಾನಗಳ ಕಾಲ ದಲಿತರು ಹಿಂದೂಧರ್ಮದಲ್ಲಿ ಪ್ರವೇಶಕ್ಕಾಗಿ, ಸಮಾನ ಒಡನಾಟಕ್ಕಾಗಿ ಹೊಸ್ತಿಲಲ್ಲಿ ಕಾದರೂ ಪ್ರಯೋಜನವಾಗಲಿಲ್ಲ. ಹೀಗಾಗಿ, ಹಿಂದಿನಿಂದಲೂ ಬೌದ್ಧರಾಗಿದ್ದ ನಾವು ಅದೇ ಧರ್ಮದಲ್ಲಿ ಮುಂದುವರಿಯಲು ನಿರ್ಧರಿಸಿದ್ದೇವೆ. ಇದರಿಂದ ಸಮಾಜ ವ್ಯವಸ್ಥೆಯಲ್ಲಿ ಬದಲಾವಣೆ ಸಾಧ್ಯವಾಗುತ್ತದೆಯೇ? ನಮ್ಮ ಸಂಕೋಲೆಗಳಿಂದ ವಿಮೋಚನೆ ದೊರೆಯುತ್ತದೆಯೇ ಎಂಬುದು ದೊಡ್ಡ ಪ್ರಶ್ನೆ. ಧರ್ಮ ಎಂದರೆ ವೈಯಕ್ತಿಕ ಮುಕ್ತಿಯ ಮಾರ್ಗ, ಧರ್ಮ ಎಂದೂ ಸಾಮೂಹಿಕವಾದುದಲ್ಲ. ಭಾರತ ದೇಶದಲ್ಲಿ ಅಲ್ಪಸಂಖ್ಯಾತರಾಗಿದ್ದು ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರು ಸುಖವಾಗಿದ್ದಾರೆ. ಅವರಿಗೆ ಮಾನಸಿಕ ಸ್ವಾತಂತ್ರ್ಯ ಇದೆ. ದಲಿತರು ಈಗ, ಹಿಂದೂ ಸಮಾಜದ ಹಿಡಿತದಲ್ಲಿ ಶಾರೀರಿಕವಾಗಿ, ಮಾನಸಿಕವಾಗಿ ಸಿಲುಕಿಕೊಂಡು ತೊಳಲಾಡುತ್ತಿದ್ದಾರೆ. ಇದು ಹುಟ್ಟಿನಿಂದಲೇ ಬಂದುದು ಹಿಡಿತವನ್ನು ಗುಲಾಮಗಿರಿಯನ್ನು ತಪ್ಪಿಸಲು ಬೌದ್ಧಧರ್ಮವನ್ನು ಅಪ್ಪಿಕೊಳ್ಳುವುದು ಅಥವಾ ಮತ್ತು ಆಚರಣೆ ಪ್ರಾರಂಭಿಸುವುದು ಅಗತ್ಯವಾಗಿದೆ. ಹಿಂದೂ ಸಮಾಜದ ಹಿಡಿತದಲ್ಲಿ ಸಿಲುಕಿರುವ ದಲಿತರನ್ನು ಬಿಡುಗಡೆ ಮಾಡಲು ‘ಬರಹಗಳನ್ನು ಬೀದಿಗೆಸೆಯರಿ', 'ಬೂಸಾ ಸಾಹಿತ್ಯ' ಎಂಬಿತ್ಯಾದಿ ಶಾಕ್ ಟ್ರೀಟ್‌ಮೆಂಟ್ ಕೊಟ್ಟಿದ್ದೇನೆ. ಒಟ್ಟು ದಲಿತ ಸಮಾಜದಲ್ಲಿ ಮುಕ್ತತೆ ತರುವುದು, ಅವರ ಬಂಧಿತ ಪ್ರಶ್ನೆಯನ್ನು ವಿಮೋಚನೆಗೊಳಿಸುವ ದಿಸೆಯಲ್ಲಿ ಇವೆಲ್ಲ ಒಂದೊಂದು ಪ್ರಯತ್ನಗಳು’ ಎಂದಿದ್ದಾರೆ.
©2024 Book Brahma Private Limited.