ಎಚ್.ಎಂ. ಮರುಳಸಿದ್ಧಯ್ಯರವರು ತಮ್ಮ ಜೀವನದಲ್ಲಿ ಆತ್ಮೀಯ ಸ್ನೇಹಿತರೊಟ್ಟಿಗೆ ಕಳೆದ ಮಧುರ ಕ್ಷಣಗಳನ್ನು, ಅವರೊಂದಿಗಿನ ಒಡನಾಟಗಳನ್ನು ಪುಸ್ತಕ ರೂಪಕ್ಕೆ ತಂದಿದ್ದಾರೆ. ಇದರಲ್ಲಿ ಕಾಲೇಜಿನಸ್ನೇಹಿತ ರಾಮಚಂದ್ರರಿಂದ ಹಿಡಿದು `ಗೊತ್ತಿಗೆ ಹಚ್ಚಿದ’ ಗುರು ಗೋಯಲ್ರವರೆಗೂ ಇರುವ ಚಿತ್ರಣಗಳನ್ನು ಕಾಣಬಹುದು. ಈ ಕೃತಿಯಲ್ಲಿ ಲೇಖಕರು ತಮ್ಮ ಸ್ನೇಹಿತರ ಇಡೀ ಜೀವನದ ವಿವರಗಳನ್ನೇನೂ ಕೊಟ್ಟಿಲ್ಲ. ಆದರೆ ಅವರ ಜೀವನದ ತುಣುಕುಗಳನ್ನು ಜ್ಞಾಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂಬುದು ಈ ಕೃತಿಯಲ್ಲಿ ಕಂಡು ಬರುತ್ತದೆ.
©2024 Book Brahma Private Limited.