ಬಿ.ಎನ್. ಸುಮಿತ್ರಾಬಾಯಿ ಅವರ ಅನುವಾದಿತ ಕೃತಿ ಶ್ರೀ ಕೃಷ್ಣದೇವರಾಯ ವಿರಚಿತ ಜಾಂಬವತೀ ಪರಿಣಯ. ಭಾರತೀಯ ಸಂಸ್ಕೃತಿಯ ತಾಯಿಬೇರು ದ್ರಾವಿಡ ಸಂಸ್ಕೃತಿಯಲ್ಲಿದೆ.ಕನ್ನಡ ದಲ್ಲಿ ನಾಟಕ ಪ್ರಕಾರ ಅನುವಾದಗಳ ಮೂಲಕವೇ ಮೂಡಿಬಂದಿರುವುದು ತಿಳಿದಿರುವ ವಿಚಾರವೇ ಆಗಿದೆ,ಈ ನಿಟ್ಟಿನಲ್ಲಿ ಸಂಸ್ಕೃತ ನಾಟಕಗಳ ಕೊಡುಗೆ ಅಮೂಲ್ಯ ವೆನಿಸುತ್ತದೆ.ಪ್ರಸ್ತುತ ಶ್ರೀ ಕೃಷ್ಣದೇವರಾಯ ಸಂಸ್ಕೃತದಲ್ಲಿ ಬರೆದ ' ಜಾಂಬವತೀಪರಿಣಯ ' ಕನ್ನಡಕ್ಕೆ ಅನುವಾದಗೊಂಡು ಪ್ರಕಟವಾಗಿದೆ.ಶ್ರೀ ವಿಜಯನಗರ ಸಾಮ್ರಾಜ್ಯದಲ್ಲಿ ಕೃಷ್ಣದೇವರಾಯ ನದು ಸುವರ್ಣಕಾಲ.ಕವಿ,ವಿದ್ವಾಸಂಸರಿಗೆ ಅಪಾರ ಆಶ್ರಯ ನೀಡಿದ್ದ ಆತ ಸ್ವತಃ ತೆಲುಗು ,ಸಂಸ್ಕೃತ ಭಾಷೆಗಳಲ್ಲಿ ಹಲವು ಕೃತಿಗಳನ್ನು ರಚಿಸಿದ್ದಾನೆ.ಆತ ರಚಿಸಿದ ' ಜಾಂಬವತೀ ಪರಿಣಯಂ' ಸಂಸ್ಕೃತ ನಾಟಕವು ಆತನ ಕವಿತಾಪ್ರತಿಭೆಯ,ಸಂಸ್ಕೃತ ಬಾಷಾ ಪಾಂಡಿತ್ಯದ,ಹರಿಬಕ್ತಿಯ ದ್ಯೋತಕವಾಗಿದೆ.ಕನ್ನಡ ನಾಡಿನ ಸಾಂಸ್ಕೃತಿಕ ಚರಿತ್ರೆಯ ಮೈಲುಗಲ್ಲುಗಳಲ್ಲಿ ಈ ಕೃತಿಗೆ ಐತಿಹಾಸಿಕ ಮಹತ್ವವೂ ಇದೆ.
©2025 Book Brahma Private Limited.