‘ಪವಿತ್ರ ಪಂಚಕನ್ಯೆಯರು- ಪರಮ ಪಂಚ ಮಿಥ್ಯೆಯರು’ ಕೃತಿಯು ಮಹಾಬಲೇಶ್ವರ ರಾವ್ ಅವರ `ಅಹಲ್ಯಾ, ದ್ರೌಪದಿ, ತಾರಾ, ಕುಂತಿ (ಸೀತಾ), ಮಂಡೋದರಿ‘ ಇವರ ಬದುಕಿನ ಒಳವಿವರಗಳನ್ನು ಒಳಗೊಂಡಂತಹ ಕೃತಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಈ ಹೆಣ್ಣುಗಳಲ್ಲಿ ಕೆಲವರು ಬಹು ಪತಿತ್ವವನ್ನು ಹೊಂದಿರುವಂಥರು. ಹಾಗಿದ್ದೂ ಅವರನ್ನು ಕನ್ಯೆಯರೆಂದು ಕರೆಯಲಾಯಿತು? ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಲೇ ಅವರು ಬದುಕಿನಲ್ಲಿ ಅನುಭವಿಸಿದ ಏಳು ಬೀಳುಗಳನ್ನು ಈ ಪುಸ್ತಕ ತೆರೆದಿಡುತ್ತದೆ. `ಒಂದು ದೃಷ್ಟಿಯಿಂದ ಇವರು ಐವರೂ ಗಂಡಿನ ದಬ್ಬಾಳಿಕೆಗೆ ಒಳಗಾದವರು. ಆದರೂ ಬಾಳಿನ ಹೋರಾಟದಲ್ಲಿ ಸೋಲದೇ ಗೆದ್ದವರು‘ ಎಂದು ಮುನ್ನುಡಿಯಲ್ಲಿ ಬನ್ನಂಜೆ ಗೋವಿಂದಾಚಾರ್ಯ ವಿವರಿಸುತ್ತಾರೆ.
©2024 Book Brahma Private Limited.