‘ಫಾಯಿಯಾನನ ಬೌದ್ಧ ರಾಜ್ಯಗಳ ಯಾತ್ರೆ’ ಕೃತಿಯ ಮೂಲ ಲೇಖಕರು ಜಾನ್ ಲೆಗ್ಗಿ. ಕನ್ನಡಕ್ಕೆ ಉದಯ್ ಕುಮಾರ್ ಹಬ್ಬು ಅವರು ಅನುವಾದಿಸಿದ್ದಾರೆ. ಚಂದ್ರಕಾಂತ ಪೋಕಳೆ ಅವರ ಬೆನ್ನುಡಿ ಬರಹವಿದೆ; ಉದಯಕುಮಾರ ಹಬ್ಬು ಅವರು ಬೌದ್ಧಧರ್ಮದ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದಾರೆ.ಈಗಾಗಲೆ ಅವರು ಬುದ್ಧನ ಜೀವನಚರಿತ್ರೆ ಮತ್ತು ತತ್ವಗಳು” "ಬುದ್ಧತ್ವ-ಸಂತೋಷಕ್ಕೆ ಒಂದೆ ದಾರಿ” ವಿಪತ್ತನ ಧ್ಯಾನ- ಅರಿವಿನ ದಾರಿ" "ಮಾನಸಿಕ ಒತ್ತಡಕ್ಕೆ ಬೌದ್ಧ ಧ್ಯಾನ" ಇವಿಷ್ಟಲ್ಲದೆ ಅಂಗುತ್ತರ ನಿಕಾಯದ ಮೂರನೆ ಭಾಗವನ್ನು ಪಾಲಿ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಇದೀಗ ಭಾರತಕ್ಕೆ ಮೊದಲು ಭೇಟಿ ಮಾಡಿದ ಚೀನಿ ಪ್ರವಾಸಿಗ ಫಾಹಿಯಾನನ "ಬೌದ್ಧ ರಾಜ್ಯಗಳ ದಾಖಲೆ" ಎಂಬ ಪುಸ್ತಕವನ್ನು ಮೂಲ ಇಂಗ್ಲಿಷಿನಲ್ಲಿ ಬರೆದ ಜಾನ್ ಲೆಗ್ಗೆ ಅವರು ಬರೆದ Fahiyan- Records of Buddhistic Kingdoms ಕನ್ನಡಕ್ಕೆ ಅನುವಾದಿಸಿದ್ದಾರೆ.ಅನುವಾದ ತುಂಬ ಸರಳ ಭಾಷೆಯಲ್ಲಿದೆ. ಈ ಅನುವಾದ ವಿದ್ಯಾರ್ಥಿಗಳಿಗೂ ಸಾಮಾನ್ಯ ಓದುಗರಿಗೂ ರುಚಿಸುವುದರಲ್ಲಿ ಎರಡು ಮಾತಿಲ್ಲ. ಈ ಪುಸ್ತಕದಲ್ಲಿ ಫಾಹಿಯಾನನು ಸಂಚಾರ ಮಾಡಿದ ವಿವಿಧ ಪ್ರದೇಶಗಳ ಸಾಮಾಜಿಕ ರಾಜಕೀಯ ಮತ್ತು ಸಾಂಸ್ಕೃತಿಕ ದಾಖಲಾತಿಗಳಿವೆ. ಈ ಪುಸ್ತಕ ಇತಿಹಾಸ ಬರೆಯುವವರಿಗೆ ಮತ್ತು ಬೌದ್ಧ ಧರ್ಮವನ್ನು ಅರಿತುಕೊಳ್ಳುವವರಿಗೆ ಉಪಯುಕ್ತವಾದ ಗ್ರಂಥ ಎಂದೇ ಹೇಳಬಹುದು.
©2025 Book Brahma Private Limited.