`ಕುಮಾರವ್ಯಾಸ ಭಾರತ ಓದು' ಇದು ಸಿ ಪಿ ನಾಗರಾಜ ಅವರ ಕೃತಿಯಾಗಿದ್ದು, ವ್ಯಾಸಭಾರತಕ್ಕೂ ವಿಭಿನ್ನವಾದ ಕುಮಾರವ್ಯಾಸ ಭಾರತದ ವಿರಾಟಪರ್ವದ ಎರಡು ಪ್ರಸಂಗಗಳನ್ನು ಓದುಗರಿಗೆ ನಾಟಕರೂಪದಲ್ಲಿ ಜೋಡಿಸಿಕೊಟ್ಟಿರುವ ಈ ಕೃತಿಯಲ್ಲಿ 'ಮೂಲ ಪಠ್ಯದ ನಾಟಕ ರೂಪ, ಪದವಿಂಗಡಣೆ ಮತ್ತು ತಿರುಳು ಜತೆಗೂಡಿದೆ. ಪಂಪ, ರನ್ನ. ಜನ್ನ, ರಾಘವಾಂಕ, ಕನಕದಾಸ, ಲಕ್ಷ್ಮೀಶ, ಕುಮಾರವ್ಯಾಸ ಮುಂತಾದ ಮಹಾಕವಿಗಳ ಸೃಜನಶೀಲ ಸಂಕಥನಗಳನ್ನು ನಮ್ಮ ಕಾಲದಲ್ಲಿಯೂ ಮೂಲರೂಪದಲ್ಲಿಯೇ ಓದಲು ಮತ್ತು ಅರ್ಥಮಾಡಿಕೊಳ್ಳಲು ನೆರವಾಗುವ ಇಂತಹ ಬರಹಗಳ ಪುಟಗಳು ಹೆಚ್ಚಾದರೂ ಓದುಗರಿಗೆ ಮತ್ತು ರಂಗಕರ್ಮಿಗಳಿಗೆ ತುಂಬಾ ಉಪಯುಕ್ತವಾಗಿದೆ. ಈ ಕೃತಿಯು ಸಿ. ಪಿ. ನಾಗರಾಜ ಅವರು ಕನ್ನಡ ರಂಗಭೂಮಿಗೆ ನೀಡಿರುವ ಒಂದು ಒಳ್ಳೆಯ ಕೊಡುಗೆ.
©2024 Book Brahma Private Limited.