ಗೋಪಾಲ ಭಟ್.ಸಿ.ಹೆಚ್ ಅವರ ‘ಶ್ರೀಕೃಷ್ಣ ಚರಿತಾಮೃತ’ ಕಾವ್ಯ ಮಾಲೆಯ ಗ್ರಂಥವಾಗಿದೆ. ಶ್ರೀಕೃಷ್ಣನ ಮಹಿಮೆಯನ್ನು ಜೀವನ ಚರಿತ್ರೆಯ ಅನೇಕ ಸಂಭವಗಳನ್ನು ಲೇಖಕರು ಭಾವಕ್ಕೆ ತಕ್ಕಂತೆ ಕಾವ್ಯ ರೂಪವನ್ನು ನೀಡಿ ವ್ಯಾಖ್ಯಾನಿಸಿದ್ದಾರೆ. ಈ ಕೃತಿಗೆ ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳು ಅನುಗ್ರಹ ಸಂದೇಶವನ್ನು ಬರೆದಿದ್ದಾರೆ. ಮೈಸೂರಿನ ರಾಜ್ಯ ಮುಕ್ತಕ ಕವಿ ಪರಿಷತ್ತಿನ ಅಧ್ಯಕ್ಷ ಮತ್ತುಸ್ವಾಮಿ ಎಂ ಅವರು ಕೃತಿಗೆ ಮುನ್ನುಡಿ ಬರೆದಿದ್ದಾರೆ. ವಸುದೇವ-ದೇವಕಿಯರ ಮದುವೆ ದಿಬ್ಬಣ, ಶ್ರೀ ಖರಷ್ಣ ಜನ್ಮಕಾಲದ ಶುಭ ಸೂಚನೆ, ಶ್ರೀ ಕೃಷ್ಣನ ಜನನ, ಕಂಸನ ಪ್ರಲಾಪ, ಪೂತನೀ ಸಂಹಾರ, ತೃಣಾವರ್ಥನ ಸಂಹಾರ, ಶ್ರೀಕೃಷ್ಣನ ಬಾಲ ಲೀಲೆಗಳು, ಅಮ್ಮನಿಗೆ ವಿಶ್ವ ರೂಪ, ಧೇನುಕಾಸುವ ವಧೆ, ಕಾಳಿಯ ಮರ್ಧನ ಹೀಗೆ ಒಟ್ಟು 172 ಶೀರ್ಷಿಕೆಗಳು ಈ ಕೃತಿ ಪರಿವಿಡಿಯಲ್ಲಿದೆ. 'ಶ್ರೀ ಕೃಷ್ಣ ಚರಿತಾಮೃತ" ಎಂಬ ಮೂರು ಸಾವಿರದ ಇನ್ನೂರಕ್ಕಿಂತಲೂ ಅಧಿಕ ಷಟ್ಪದಿಯನ್ನೊಳಗೊಂಡ, ಕಾವ್ಯ ಮಾಲೆ ಇದಾಗಿದೆ.
©2024 Book Brahma Private Limited.