ವಿದ್ವಾಂಸ ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಅವರ ಕೃತಿ-ದೇವಕಿಯ ಚಿಂತನೆಗಳು. ಪುರಾಣದ ದೇವಕಿಯ 8ನೇ ಮಗು ಕೃಷ್ಣ. 7ನೇ ಮಗು ಬಲರಾಮ. ರಾಜ ಕಂಸನು ದೇವಕಿಯ ಮಕ್ಕಳಿಂದ ತನಗೆ ಜೀವಭಯ ಇದೆ ಎಂದು ತಿಳಿದು ಅವರನ್ನು ಹುಟ್ಟಿದ ತಕ್ಷಣ ಕೊಲ್ಲಲು ನಿರ್ಧರಿಸುತ್ತಾನೆ. ಹಾಗೆ ಆಗುತ್ತದೆ. ಆದರೆ, ತಂದೆ ವಸುದೇವ ಹಾಗೂ ತಾಯಿಯ ನಿರ್ಧಾರ ಹಾಗೂ ದೈವಬಲದೊಂದಿಗೆ 7ನೇ ಮಗು ಹಾಗೂ 8ನೇ ಮಗು ಕೃಷ್ಣ ಕಂಸನ ಕಣ್ಣು ತಪ್ಪಿಸಿ, ಹೊರಗಡೆ ಬೆಳೆಯುತ್ತಾರೆ. ಮುಂದೆ ಕೃಷ್ಣನು ಕಂಸನ ವಧೆ ಮಾಡುತ್ತಾನೆ. ಈ ಹಿನ್ನೆಲೆಯಲ್ಲಿ, ದೇವಕಿಯು ಒಬ್ಬ ತಾಯಿಯಾಗಿ ಅನುಭವಿಸುವ ನೋವು, ಯಾತನೆ, ಮಾತೃಧರ್ಮವನ್ನು ನಿರ್ವಹಿಸಿದ ರೀತಿ, ಉದಾತ್ತ ಚಿಂತನೆ ಇಂತಹ ಮೌಲ್ಯಗಳನ್ನು ಲೇಖಕರು ತಮ್ಮದೇ ಆದ ತೀಕ್ಷಣ ದೃಷ್ಟಿಕೋನದಿಂದ ವಿಮರ್ಶೆಗೆ ಒಳಪಡಿಸಿದ್ದೇ ಈ ಕೃತಿ.
©2024 Book Brahma Private Limited.