ಲೇಖಕ ಕೆ. ಎಸ್. ನಾರಾಯಣಾಚಾರ್ಯ ಅವರ ಪುರಾಣ ವಿಮರ್ಶಾತ್ಮಕ ಕೃತಿ ʻಮಹಾಪ್ರಸ್ಥಾನʼ. ಪುಸ್ತಕವು ಮಹಾಭಾರತ ಕಾವ್ಯದಲ್ಲಿ ಬರುವ ಪಂಚಪಾಂಡವರ ಪತ್ನಿ ದ್ರೌಪದಿಯ ಕುರಿತು ಹೇಳುತ್ತದೆ. ಲೇಖಕರೇ ಹೇಳುವಂತೆ, “ಒಬ್ಬಳೇ ಹಿಂದೆ ಹಿಂದೆ ಅನುಸರಿಸುತ್ತಾ, ಪಾಂಡವರು ಮುಂದೆ ಮುಂದೆ ಸರಿಯುತ್ತಾ, ಇವಳ ಹೃದಯಾಳದ ನೋವಿನ ಪಾತಾಳಗರಡಿಯ ದರ್ಶನದಲ್ಲಿ ನನಗೆ ಅನೇಕ ತಾತ್ತ್ವಿಕ ಪ್ರಶ್ನೆಗಳನ್ನು ಎತ್ತಿ, ಆಯಾಮಗಳನ್ನು ವಿವರಿಸುವ ಅವಕಾಶವೂ ಲಭ್ಯವಾಯ್ತು. ಏನು ಈ “ಸಶರೀರಸ್ವರ್ಗಪ್ರಾಪ್ತಿ” ಎಂದರೆ? ಧರ್ಮಜ ಹಾಗೆ ಆಶಿಸಿದ್ದು ಯುಕ್ತವೇ? ತಮ್ಮಂದಿರಿಗೆ, ಪತ್ನಿಗೆ ಬಲಾತ್ಕಾರ ‘ಆರೋಹಣವೇ?’ “ಎಲ್ಲಿಗೆ” ಎಂದರೆ, ತಿಳಿಯದವರಿಗೆ “ಸ್ವರ್ಗಾರೋಹಣದ ಬಲಾತ್ಕಾರವೇಕೆ? ಅದು ಅವರಿಗೆ ಸಾಧ್ಯವೂ ಆಗಲಿಲ್ಲವೆಂದಾದರೆ, ಧರ್ಮಜನಿಗೆ ಮುಂಚೆ ಏಕೆ ತಿಳಿಯಲಿಲ್ಲ? ಮೂಲ ಮಹಾಭಾರತದಲ್ಲಿ ಈ ಯಾವುದೂ ಸ್ಪಷ್ಟ ಉತ್ತರ ಪಡೆದಿಲ್ಲ. ನಮಗೆ, ಇಂದಿನವರಿಗೆ ಪ್ರಶ್ನೆ ತೀರುವುದಿಲ್ಲ! ಹೇಗೆ ಬಗೆಹರಿಸುವುದು? ಈ ದಿಸೆಯಲ್ಲೇ ಇಲ್ಲಿ ಕಥೆ, ಅದರ ಸೂತ್ರ ನಡೆಯುತ್ತದೆ.”.
©2024 Book Brahma Private Limited.