ಲೇಖಕ ಗೋಪಾಲಕೃಷ್ಣ ಮಧ್ಯಸ್ಥ ಅಥವಾ ಜಿ.ಕೆ.ಮಧ್ಯಸ್ಥ ಅವರ ಕೃತಿ ʻ151 ರಾಮಾಯಣದ ಕಥೆಗಳುʼ. ಮಕ್ಕಳಿಗಾಗಿ ಬರೆದಿರುವ ಈ ಪುಸ್ತಕದಲ್ಲಿ ರಾಮಾಯಣವನ್ನು 151 ಸಣ್ಣ ಕತೆಗಳಾಗಿ ಹೇಳಿದ್ದಾರೆ. ಇದು ಮಕ್ಕಳಿಗೆ ರಾಮಾಯಣದ ಇಡೀ ಕತೆಯನ್ನು ಸುಲಭವಾಗಿ ಅರ್ಥೈಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಇದನ್ನು ವಾಲ್ಮೀಕಿ ಮಹರ್ಷಿಯು ರಚಿಸಿದ್ದು, ಹಿಂದೂ ಧರ್ಮದ ಪವಿತ್ರ ಗ್ರಂಥಗಳಲ್ಲಿ ಒಂದಾಗಿದೆ. ಅಯೋಧ್ಯೆಯ ಸೂರ್ಯವಂಶದ ರಾಜಪುತ್ರ ರಾಮ, ಆತನ ಪತ್ನಿ ಸೀತೆ ಹಾಗೂ ಸೀತೆಯ ಅಪಹರಣ ಮಾಡಿದ ರಾವಣನ ಸಂಹಾರ ಕುರಿತಾಗಿ ಕತೆಯನ್ನು ರಚಿಸಲಾಗಿದೆ. ಈ ಮಧ್ಯೆ ಹಾದುಹೋಗುವ ದಶರಥ, ಭರತ, ಲಕ್ಷ್ಮಣ, ಹನುಮಂತ, ವಿಶ್ವಾಮಿತ್ರ ಹಾಗೂ ಇನ್ನಿತರ ಪಾತ್ರಗಳನ್ನು ಹಾಗೂ ಅವರು ಬರುವ ಸನ್ನಿವೇಶಗಳನ್ನು ಇಲ್ಲಿ ಲೇಖಕರು ಮಕ್ಕಳಿಗಾಗಿ ಸಣ್ಣ- ಸಣ್ಣ ಕತೆಗಳ ರೂಪದಲ್ಲಿ ವಿಂಗಡಿಸಿ ಬರೆದಿದ್ದಾರೆ.
©2024 Book Brahma Private Limited.