ಲೇಖಕಿ ನಾರಾಯಣೀ ದಾಮೋದರ್ ಅವರ ಕೃತಿ ’ಚಂದ್ರವಂಶದ ಕಥೆ’.
ಚಂದ್ರವಂಶದ ಪೌರಾಣಿಕ ಒಳನೋಟವನ್ನು ಸರಳವಾಗಿ ಈ ಪುಸ್ತಕದಲ್ಲಿ ಪರಿಚಯಿಸಿದ್ದಾರೆ. ಚಂದ್ರವಂಶದ ಸ್ಥೂಲ ಪರಿಚಯವು ಒಂದೆಡೆ ಸಿಗುವ ಉದ್ದೇಶದಿಂದ ಈ ಪುಸ್ತಕವನ್ನು ತರಲಾಗಿದೆ.
ಬ್ರಹ್ಮ ಸೃಷ್ಟಿಯ ಕಲ್ಪನೆ, ಅಸ್ಥಿರ ಸುಖದ ಚಂದ್ರಸಂಸಾರ, ಬುಧ, ಪುರೂರವ, ಆಯು, ನಹುಷ, ಯಯಾತಿ, ಯಯಾತಿಯ ಮತ್ತೊಂದು ಭೂಯಾತ್ರೆ, ಯಯಾತಿಯ ನಂತರ, ದೀರ್ಘಕಾಲದವರೆಗಿನ ಸದ್ದುಮಾಡದ ಸಂತಾನ, ದುಷ್ಯಂತ, ಭರತ, ಪ್ರತೀಪ, ಶಂತನು, ಭೀಷ್ಮ, ಚಿತ್ರಾಂಗದ ಮತ್ತು ವಿಚಿತ್ರವೀರ್ಯ – ಸುಳಿನೋಟ, ವೇದವ್ಯಾಸರು, ಕುರುಕ್ಷೇತ್ರದಿಂದ ಹಸ್ತಿನಾವತಿಯತ್ತ ಎನ್ನುವ ಬರಹಗಳು ಈ ಕೃತಿಯಲ್ಲಿವೆ. ಮೂಲ ಪುರುಷ ಚಂದ್ರನಿಂದ ಹಿಡಿದು ಪುರು, ಯಯಾತಿ, ಪಾಂಡವರು, ಕೌರವರುಗಳನ್ನೆಲ್ಲಾ ದಾಟಿ ಪರೀಕ್ಷಿತ ರಾಜನನ್ನೂ ಮೀರಿ ಮುಂದುವರೆದ ಚಂದ್ರವಂಶದ ವಿವರಗಳು ಈ ಪುಸ್ತಕದಲ್ಲಿ ದಾಖಲಾಗಿವೆ
©2024 Book Brahma Private Limited.