ನಂದಿಕೇಶ್ವರ

Author : ಮನೋರಮಾ ಬಿ.ಎನ್

Pages 136

₹ 100.00




Year of Publication: 2016
Published by: ಶ್ರೀ ಭಾರತೀ ಪ್ರಕಾಶನ
Address: ಶ್ರೀ ಭಾರತೀ ಪ್ರಕಾಶನ, ಶ್ರೀ ರಾಮಚಂದ್ರಾಪುರಮಠ

Synopsys

‘ನಂದಿಕೇಶ್ವರ, ಮನೋರಮಾ ಬಿ.ಎನ್. ಅವರ ಕೃತಿಯಾಗಿದೆ. ಇದಕ್ಕೆ ಕೊರ್ಗಿ ಶಂಕರನಾಯಣ ಉಪಾಧ್ಯಾಯ ಅವರ ಬೆನ್ನುಡಿ ಬರಹವಿದೆ; ನಂದಿಕೇಶ್ವರ, ನಂದಿ, ನಂದೀಶ ಇತ್ಯಾದಿ ನಂದಿಯ ಸಂಬಂಧವಾದ ಎಲ್ಲ ನಾಮೋಲ್ಲೇಖಗಳನ್ನೂ ಲೇಖಿಕೆ ಜಾಲಾಡಿದ್ದಾರೆ. ನಂದಿಕೇಶ್ವರನ ಕುರಿತಾದ ಕಣೋಟ ಕೇವಲ ದರ್ಪಣಕಾರನಿಗಷ್ಟೇ ಸೀಮಿತವಾಗಿ, ಹದ ತಪ್ಪಬಾರದು ಎಂಬ ಉದ್ದೇಶದಿಂದ, ಸಂಬಂಧಿಸಿದ ಪುರಾಣ, ಇತಿಹಾಸಗಳನ್ನೆಲ್ಲ ಹೆಸರಿಗೆ ಮಾಹಿತಿಯ ಮೂಟೆಯನ್ನೇ ಕಟ್ಟಿಕೊಟ್ಟಿದ್ದಾರೆ. ಶಿವಪುರಾಣಾದಿಗಳಲ್ಲಿ ಇಣುಕುವ ನಂದಿಯೇ ದರ್ಪಣಕಾರ ನಂದಿಕೇಶ್ವರ ಪ್ರಬಲವಾದ ವಾದಪಂಥವೂ ಇದೆಯಾದ್ದರಿಂದ, ಅದರ ಸಾಧುತ್ವ ಸಾಧ್ಯತೆಗಳನ್ನು ಮಥಿಸಿದ್ದಾರೆ ಎಂಬುವುದನ್ನು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

About the Author

ಮನೋರಮಾ ಬಿ.ಎನ್

ಮನೋರಮಾ ಬಿ.ಎನ್ ಅವರು ಮೂಲತಃ ಮಡಿಕೇರಿಯವರು.ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಹಾಗೂ ಭರತನಾಟ್ಯ,-ಈ ಎರಡರಲ್ಲೂ ಸ್ನಾತಕೋತ್ತರ ಪದವೀಧರರು. ಭರತನಾಟ್ಯದ ಸಾಮಾಜಿಕ ಸಂವಹನಗಳ ಕುರಿತು ಸಂಶೋಧನಾ ವಿದ್ಯಾರ್ಥಿ. ‘ನೂಪುರ ಭ್ರಾಮರಿ’ ಪ್ರತಿಷ್ಠಾನದ ಅಧ್ಯಕ್ಷೆಯಾಗಿದ್ದಾರೆ.  ಕೃತಿಗಳು : ಭಾರತೀಯ ನಾಟ್ಯ ಸಂಪ್ರದಾಯಗಳು ಮತ್ತು ಯಕ್ಷಗಾನ, ಮಹಾಮುನಿ ಭರತ, ಮಾರ್ಗ ಮುಕುರ. ...

READ MORE

Related Books