ವಾಲ್ಮೀಕಿ ಪುರಾಣ ಪುರುಷರ ಬದುಕಿನ ಕುರಿತಾದ ಪುಸ್ತಕವನ್ನು ಲೇಖಕ ತ.ಸು. ಶಾಮರಾಯ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಭಯಂಕರ ದರೋಡೆಕೋರನಿಂದ ಬ್ರಹ್ಮರ್ಷಿಯಾದ ವ್ಯಕ್ತಿ; ಮಹರ್ಷಿ ನಾರದರಿಂದಲೇ ರಾಮಾಯಣದ ಕಥೆಯನ್ನು ಕೇಳಿ ಅದನ್ನು ರಮಣೀಯವಾಗಿ ಬರೆದ ’ಆದಿಕವಿ’, ’ಕವಿಕೋಗಿಲೆ’; ಸೀತಾಮಾತೆಗೆ ಆಶ್ರಯವಿತ್ತು ಆಕೆಯ ಮಕ್ಕಳಿಗೆ ಗುರುವಾದ ತಾಪಸಿ ಎಂದು ವಾಲ್ಮೀಕಿಯ ಕುರಿತಾಗಿ ಕೃತಿಯಲ್ಲಿ ಉಪಚರಿಸುತ್ತಾರೆ. ವಾಲ್ಮೀಕಿ ಮಹರ್ಷಿ ಕೇವಲ ರಾಮಾಯಾಣದ ಕಥೆಗೆ ಸೀಮಿತವಾಗದೆ ರಾಮನ ಪತ್ನಿ ಸೀತಾಮಾತೆಯ ಬದುಕಿನ ಅನೇಕಗಟ್ಟಗಲಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹಾಗಾಗಿ ಇವರ ಬದುಕಿನ ಅನೇಕ ಘಟನೆಗಳನ್ನು ಲೇಖಕರು ಇಲ್ಲಿ ಸುಂದರವಾಗಿ ಮತ್ತು ಸರಳ ಭಾಷೆಯಲ್ಲಿ ಚಿತ್ರಿಸಿದ್ದಾರೆ.
©2025 Book Brahma Private Limited.