ಪಾಯಸವೆ ಪೀಯೂಷ ಪತ್ನಿಯರ ಗರ್ಭಕ್ಕೆ ಪಾಯವಾಯಿತು ರಾಮಕಥೆಗಾ ಸಿಹಿಯ ಪಾತ್ರೆ ಪೇಯವಾಯ್ತಲ್ಲರಿಗು ವಾಲ್ಮೀಕಿ ರಚಿತ ಕೃತಿ ಗಾಯನಕೆ ಪಠಣಕ್ಕೆ ದರುಶನಕೆ ಕಾವ್ಯಸುಧೆ ಪುರುಷರಲ್ಲುತ್ತಮನ ಪರಶುನಡೆಯೊಳುಮರ್ಥ ದರುಶನವು ದೊರೆಯ ಧೇನಿಸುವುದನಿವಾರ್ಯ ಪುರಜನರೆ ಶ್ರೇಷ್ಠರೈ ಪರಿಪಾಲಿಪನಿಗೆಂದು ಪರಿಪರಿಯೊಳೊರೆವುದೆ ರಾಮಾಯಣದ ಸಾರ ಮುಕ್ತಿಯಿತ್ತನು ರಾಮ ಮುನಿಪತ್ನಿ ಕಲುಷತೆಗೆ ಶಕ್ತಿಯಿತ್ತನು ಜಲಧಿ ಪಾಠ ಹನುಮನಿಗಂದು ರಕ್ತಿಗುಂ ವಿರಕ್ತಿಗುಂ ಸಾದೃಶವು ರಾಮನು ಕ್ಷಿತಿಗೀಶ ಕೃತಿಗೀಶ ಸನ್ಮತಿಗುಮೀಶನೋ ದಶರಥನ ಮರಣದಿಂ ದಶಕಂಠ ವಧೆಯನಕ ವಿಷಯ ವಿಶದತೆಯೆನಿತೋ ವಿಷಮ ಕುಟಿಲತೆಯನಿತು ಪಶುವಾದ ಪೌಲಸ್ಯ ಶಿಶುವಾದ ಶ್ರೀವಿಷ್ಣು ಕಲೆ ಬೀಸುತಿರೆ ವಿಧಿಯು ದಿಶೆ ದಿಶೆಗು ಬೆರಗು ಮತಿ ಕಥಿತ ಮನಮಥನ ಹೃತ್ಕದದ ಕಟಕಟನ ವ್ಯಥಿತರನು ಪೊರೆದವನ ಕಥನಪರಿ ಮನಭರಣ ತುತಿಸುವರು ರಾಮನನು ಪ್ರಕಾಶರೆಂದೆಂದು ಕೃತಿ ನಿರುಕಿಸುವರಿಂದು ಸ್ವಾಮಿಯನುಗ್ರಹ ಸಂದು ಪುರುಷೋತ್ತಮನ ಪರ್ವ ಪ್ರಕಟಿಪರಿಗುಂ ಗರ್ವ ಚಿರಕಾಲ ಸ್ಮರಣಕ್ಕೆ ಹೊಸೆದಿಹುದು ಸರಿಪಥವ ಗುರುಗಳಿಗೆ ಪ್ರಿಯವಾಯ್ತು ಗುರುಲಘುವಿನಾಟದೊಳು ಹಿರಿಯರಿಗು ಕಿರಿಯರಿಗು ರುಚಿಪುದೀ ಹುರಿಗಾಳು.
©2024 Book Brahma Private Limited.