‘ಭೂಮಿಕಾ ಸೀತಾ ಕಥನ’ ಆದಿತ್ಯ ಅಯ್ಯಂಗಾರ್ ಅವರ ಮೂಲ ಪೌರಾಣಿಕ ಕೃತಿಯಾಗಿದ್ದು, ಜ್ಯೋತಿ ಎ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯನ್ನು ರಾಮನಿಲ್ಲದಿದ್ದರೆ ಸೀತೆ ಏನಾಗುತ್ತಿದ್ದಳು? ಅವಳ ಬದುಕು ಹೇಗಿರಬಹುದಿತ್ತು? ಎಂಬುದನ್ನು ಕಲ್ಪನೆ ಮಾಡಿಕೊಂಡು ರಚಿಸಲಾಗಿದೆ. ಪೌರಾಣಿಕ ಪಾತ್ರಗಳಿಗೆ ಆಧುನಿಕ ಸ್ತ್ರೀವಾದಿ ಚಿಂತನೆಗಳನ್ನು ಬೆಸೆದಿದ್ದು, ಮಹಿಳೆಯರು ಹೇಗೆ ಎಂತಹ ಸಂದರ್ಭದಲ್ಲೂ ಯಾವುದೇ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬಲ್ಲರು ಎಂಬುವುದನ್ನು ತಿಳಿಸುತ್ತದೆ. ಒಟ್ಟಾರೆಯಾಗಿ ಸಮಾಜದಲ್ಲಿ ರೂಢಿಯಲ್ಲಿರುವ ಪುರುಷಪ್ರಾಧಾನ್ಯದ ಸಿದ್ಧ ಮಾದರಿಗಳನ್ನು ಒಡೆದು ಮುನ್ನಡೆಯಬಲ್ಲರು ಎಂಬುದನ್ನು ಈ ಕೃತಿ ಕಟ್ಟಿಕೊಡುತ್ತದೆ.
©2025 Book Brahma Private Limited.