ದೇವತೆಗಳು ಹಾಗೂ ದೈತ್ಯರು ಜೊತೆಗೂಡಿ ಸಮುದ್ರ ಮಂಥನ ಮಾಡುತ್ತಲಿದ್ದರು. ಮೇರು ಪರ್ವತವು ಕಡೆಗೋಲಾಗಿಯೂ ವಾಸುಕಿ ನಾಗನು ಹಗ್ಗವಾಗಿಯೂ ಉಪಯೋಗವಾಗಿದ್ದವು. ವಾಸುಕಿಯ ಬಾಲವು ದೇವತೆಗಳ ಕೈಯಲ್ಲಿದ್ದರೆ, ತಲೆ ದೈತ್ಯರ ಕೈಯಲ್ಲಿತ್ತು. ದೇವತೆಗಳ ಕಡೆಗೆ ಇಬ್ಬರು ಮಾನವರಿದ್ದರು. ವಾನರ ಮಾನವರಾದ ವಾಲಿ ಹಾಗೂ ಸುಗ್ರೀವರು. ಇಬ್ಬರೂ ಸೋದರರು. ವಾಲಿ ಅತ್ಯಂತ ಬಲಾಢ್ಯ ಯುಕ್ತಿಗಳನ್ನು ಹೊಂಚುವುದರಲ್ಲಿ ಇಂದ್ರದೇವರಷ್ಟು ಧೂರ್ತತನ ಮತ್ತಾರಿಗೂ ಇರಲು ಸಾಧ್ಯವಿಲ್ಲ. ಬಲಿರಾಜನೂ ಕೂಡ ಇಂದ್ರದೇವನ ಎದುರು ಸೋಲಲೇಬೇಕಾಯಿತು. ದೇವತೆಗಳು ವಿಷ್ಣುದೇವರ ಮಾತನ್ನೇ ಕೇಳುವಂಥವರು. ಆದರೆ ಅವರ ಶಕ್ತಿ ಹಾಗೂ ಅಧಿಕಾರ ಕೇವಲ ಸ್ವರ್ಗಕ್ಕೆ ಮಾತ್ರ ಸೀಮಿತವಾದದ್ದು. ಅದರಲ್ಲೂ ಮಹೇಶ್ವರ ಉರ್ಫ್ ಶಂಕರರಲ್ಲಿ ವಿಶ್ವವನ್ನೇ ಸಂಹಾರ ಮಾಡುವ ಶಕ್ತಿ ಇತ್ತು. ಬ್ರಹ್ಮ ದೇವರಿಗೆ ನಿರ್ಮಾಣದ ಶಕ್ತಿ. ಆವರು ವಿಶ್ವದ ನಿರ್ಮಾಣವನ್ನೇ ಮಾಡಿದ್ದರು. ವಿಷ್ಣುದೇವರ ಹತ್ತಿರ ವಿಶ್ವದ ಮೇಲೆ ಪೂರ್ಣ ಅಧಿಕಾರವಿತ್ತು.ಇಂದ್ರದೇವರು ಅವರ ಕೆಳಗಿನ ಸ್ಥಾನದಲ್ಲಿದ್ದವರು. ವಾಲಿ ಸೂರ್ಯದೇವನ ಕಟ್ಟಾ ಭಕ್ತ. ಅಲ್ಲದೇ ಇಂದ್ರದೇವನ ಮಗನೂ ಆಗಿದ್ದನು. ಆದರೆ ಅವನ ತಾಯಿ ಮಾತ್ರ ಇಂದ್ರದೇವನ ಪತ್ನಿಯಾದ ಶಚಿದೇವಿಯಲ್ಲ. ಅವಳೊಬ್ಬ ವಾನರ ಮಾನವಿ. ಅವಳ ಹೆಸರು ವಿಯತಿ. ಇಂದ್ರದೇವರಿಗೆ ಸ್ರ್ತೀಯರಲ್ಲಿ ಅಭಿರುಚಿ ಅಪಾರ. ಆದರೆ ಅವರು ನಂತರದ ಪರಿಣಾಮದ ಬಗ್ಗೆ ಎಂದೂ ಯೋಚಿಸಿದವರಲ್ಲ. ಅಂದರೆ ಪುತ್ರಪ್ರಾಪ್ತಿಯ ಜವಾಬ್ದಾರಿಯನ್ನು ಎಂದೂ ಹೊರುತ್ತಿರಲಿಲ್ಲ. ಈ ರೀತಿ ಸಮುದ್ರದಿಂದ ಜನ್ಮ ತಾಳಿದ ಆರು ಜನರ ಸುಂದರಿಯರಲ್ಲಿ ಮೇನಕೆಯು ಕೂಡ ಒಬ್ಬಳು. ಇದು ಅವಳದೆ ಕೆಥೆಯಾಗಿದೆ.
©2024 Book Brahma Private Limited.